ಮೈಸೂರು: ವಿಜಯ ವಿಠಲ ವಿದ್ಯಾ ಶಾಲೆಯು ಮೈಸೂರು ವಿಶ್ವವಿದ್ಯಾಲಯದ ಓವೆಲ್ ಮೈದಾನದಲ್ಲಿ ವಾರ್ಷಿಕ ಕ್ರೀಡಾಕೂಟ ಏರ್ಪಡಿಸಿತ್ತು. ವೇದಿಕೆಯ ಮೇಲಿನ ಗಣ್ಯರು ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಲಕ್ಷ್ಮಿಕಾಂತ್.ಎನ್.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ,ಅರಣ್ಯ ಭವನ್, ಮೈಸೂರು, ಇವರು ಮಾತನಾಡುತ್ತಾ, ಪಥಸಂಚಲನ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಪ್ರತಿಯೊಬ್ಬ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳುವ ಸುಸಂದರ್ಭವಿದು ಎಂದು ಮಕ್ಕಳಿಗೆ ಪ್ರೇರಣೆ ತುಂಬಿದರು. ಎಲ್ಲಾ ಆಟಗಳ ಮೇಲೂ ಗಮನಹರಿಸದೆ ಒಂದು ಆಟದ ಕಡೆ ಗಮನಹರಿಸಿ ಸಾಧನೆ ಮಾಡಬೇಕು.

ಒಲಂಪಿಕ್ಸ್‌ನಲ್ಲಿ ಸಾಧನೆ ಮಾಡಿ ದೇಶಕ್ಕೆ ಗೌರವ ತಂದ ಸಾಧಕರನ್ನು ನೆನೆಯುತ್ತಾ ಮುಂದೆ ನೀವೂ ಆ ಜಾಗದಲ್ಲಿ ನಿಲ್ಲಬೇಕು ಎಂದು ಪ್ರೋತ್ಸಾಹಿಸಿದರು.ಅರಣ್ಯ ಸಂರಕ್ಷಿಸುವುದು ಕೂಡ ಒಂದು ಸಾಧನೆ. ಈ ಜವಾಬ್ದಾರಿಯನ್ನು ನಿರ್ವಹಿಸುವ ಕಡೆ ಇಂದಿನ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಪ್ರೋತ್ಸಾಹಿಸಿದರು.ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು.ನಮ್ಮ ವೃತ್ತಿಯನ್ನು ನಾವೇ ಆಯ್ಕೆ ಮಾಡಿಕೊಳ್ಳುವಂತವರಾಗಬೇಕೆಂದು ಮಕ್ಕಳಲ್ಲಿ ಉತ್ಸಾಹ ತುಂಬುವ ನುಡಿಗಳನ್ನು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷ ಡಾ.ಎಂ.ಜಗನ್ನಾಥ ಶೆಣೈ,ಟ್ರಸ್ಟಿ, ವಿಜಯ ವಿಠಲ ವಿದ್ಯಾ ಸಂಸ್ಥೆಗಳು,ಇವರು ಮಾತನಾಡುತ್ತಾ,ಮಕ್ಕಳ ಸಾಧನೆಯನ್ನು ಅಭಿನಂದಿಸುತ್ತಾ ಮಕ್ಕಳ ಸಾಧನೆಗೆ ಕಾರಣಕರ್ತ ಶಿಕ್ಷಕರನ್ನು ಅಭಿನಂದಿಸಿದರು.ಸಾಧನೆಗೆ ಸದೃಢ ಮನಸ್ಸಿರಬೇಕು ಎಂದು ತಿಳಿಸಿದರು. ತಂದೆತಾಯಿಯರು ಮಕ್ಕಳು ದೇಹ ದಂಡಿಸಲು ಅವಕಾಶ ನೀಡಬೇಕು.ಇದರಿಂದ ಮಕ್ಕಳಲ್ಲಿ ಸ್ಫೂರ್ತಿ ಬರುತ್ತದೆ ಎಂದು ಹುರಿದುಂಬಿಸಿದರು. ಕಾರ್ಯಕ್ರಮದ ವಿಶೇಷೆವೆಂದರೆ ಉತ್ತಮವಾಗಿ ಪಥಸಂಚಲನ ಮಾಡಿದ ಮಕ್ಕಳನ್ನು ವೇದಿಕೆಯ ಮೇಲಿನ ಗಣ್ಯರು ಪಾರಿತೋಷಕ ನೀಡುವ ಮೂಲಕ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಿಜಯ ವಿಠಲ ವಿದ್ಯಾ ಸಂಸ್ಥೆಗಳ ಗೌರವ ಕಾರ್ಯದರ್ಶಿಗಳಾದ ಶ್ರೀಯುತ ವಾಸುದೇವ್ ಭಟ್ ರವರು,ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಸತ್ಯಪ್ರಸಾದ್ ರವರು, ವಿಜಯ ವಿಠಲ ವಿದ್ಯಾ ಶಾಲೆಯ ಪ್ರಾಂಶುಪಾಲರಾದ ವೀಣಾ.ಎಸ್.ಎ.ರವರು, ವಿವಿಧ ವಿಭಾಗದ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ ವರ್ಗದವರು, ಪೋಷಕರು ಉಪಸ್ಥಿತರಿದ್ದರು.
