Monday, April 28, 2025
Google search engine

Homeರಾಜಕೀಯಈಶ್ವರಪ್ಪನವರ ಮನವೋಲಿಸುತ್ತೇವೆ: ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ

ಈಶ್ವರಪ್ಪನವರ ಮನವೋಲಿಸುತ್ತೇವೆ: ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ

ಬೆಂಗಳೂರು: ಈಶ್ವರಪ್ಪನವರ ಮನವೋಲಿಸುತ್ತೇವೆ ಮತ್ತು ಜಗದೀಶ ಶೆಟ್ಟರ್​ ಬೆಳಗಾವಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ.

ಪುತ್ರನಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆ ಅಸಮಾಧಾನಗೊಂಡಿರುವ ಈಶ್ವರಪ್ಪ ಹಾಗೂ ಬೆಳಗಾವಿ ಟಿಕೆಟ್ ಕುರಿತು ಇಂದು ಬೆಳಗ್ಗೆ ಡಾಲರ್ಸ್​ ಕಾಲೋನಿಯಲ್ಲಿ ಮಾತನಾಡಿದರು.

ಈಶ್ವರಪ್ಪನವರು ಇಂದು ಸಂಜೆಯೊಳಗೆ ತಮ್ಮ ನಿರ್ಧಾರವನ್ನು ತಿಳಿಸುತ್ತೇವೆ ಅಂತಾ ಹೇಳಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ಖಂಡಿತಾ ಅವರ ಮನವೋಲಿಸುತ್ತೇವೆ. ಅವರು ನಮ್ಮ ಜೊತೆಗೆ ಇರಬೇಕು. ಅವರು ನಮ್ಮ ಹಿರಿಯ ನಾಯಕರು. ಎಲ್ಲವೂ ಸರಿ ಹೋಗುತ್ತದೆ ಎಂಬ ವಿಶ್ವಾಸ ನಮಗೆ ಇದೆ ಎಂದು ಹೇಳಿದರು.

ಜಗದೀಶ್ ಶೆಟ್ಟರ್​ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಜಗದೀಶ್ ಶೆಟ್ಟರ್​ ಅವರು ಬಂದಿದ್ದರು. ಅವರಿಗೆ ಬೆಳಗಾವಿಯಿಂದ ಸ್ಪರ್ಧೆ ಮಾಡಲು ಇಷ್ಟವಿರಲಿಲ್ಲ. ಕೊನೆಗೆ ನಾನು ಮನವೋಲಿಸಿ ಬೆಳಗಾವಿಯಲ್ಲಿ ಸ್ಪರ್ಧಿಸುವಂತೆ ಮನವೊಲಿಸಿದ್ದೇನೆ. ಅವರು ಸಂತೋಷದಿಂದ ಒಪ್ಪಿಕೊಂಡು ಹೋಗಿದ್ದಾರೆ. ಬಹಳ ದೊಡ್ಡ ಅಂತರದಲ್ಲಿ ಬೆಳಗಾವಿಯಿಂದ ಗೆಲ್ಲಲು ಸಾಧ್ಯವಿದೆ. ಅದರಲ್ಲೇನು ಅನುಮಾನವಿಲ್ಲ. 28 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸವಿದೆ, ಮೋದಿ ಅವರ ಆಶೀರ್ವಾದಿಂದ ಗೆಲುವು ಕಷ್ಟವೆನಿಸುತ್ತಿಲ್ಲ ಎಂದು ಯಡಿಯೂರಪ್ಪನವರು ಹೇಳಿದರು.

ಗುರುವಾರವಷ್ಟೇ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರನ್ನು ಭೇಟಿಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜಕೀಯ ವಿಚಾರದ ಕುರಿತು ಚರ್ಚೆ ನಡೆಸಿದರು. ಡಾಲರ್ಸ್ ಕಾಲೋನಿಯ ಬಿಎಸ್​ ವೈ ನಿವಾಸದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಮತ್ತು ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಿ ಲೋಕಸಭಾ ಚುನಾವಣೆ ಕುರಿತು ಚರ್ಚಿಸಿದರು.

RELATED ARTICLES
- Advertisment -
Google search engine

Most Popular