ರಾಮನಗರ: ಹಾಸನ ಜಿಲ್ಲೆಯಲ್ಲಿನ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಕುರಿತು ಈಗಾಗಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ವನ್ನು ರಚಿಸಲಾಗಿರುತ್ತದೆ.
ತನಿಖಾ ಕಾಲದಲ್ಲಿ ಈ ಘಟನೆಗೆ ಸಂಬಂಧಪಟ್ಟಂತೆ ಇನ್ನೂ ಸಂತ್ರಸ್ತರಿರುವುದು ಗೊತ್ತಾಗಿದ್ದು, ಯಾರೇ ಸಂತ್ರಸ್ತರು ಅಥವಾ ಬಾತ್ಮೀದಾರರಿಗೆ ಕಾನೂನಿನ ನೆರವು ಮತ್ತು ರಕ್ಷಣೆ ಹಾಗೂ ಇನ್ನಿತರ ಯಾವುದೇ ಸಹಾಯ ಬೇಕಾದಲ್ಲಿ ಸಹಾಯವಾಣಿ ಸಂಖ್ಯೆ: 6360938947 ಗೆ ಕರೆ ಮಾಡಬಹುದಾಗಿದ್ದು, ಸಂತ್ರಸ್ತರ ಅಥವಾ ಬಾತ್ಮೀದಾರ ವಿವರಗಳನ್ನು ಗುಪ್ತವಾಗಿಡಲಾಗುವುದು ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.