ಮಂಡ್ಯ: ಕಾವೇರಿ ಕರ್ನಾಟಕ, ತಮಿಳುನಾಡು ಇಬ್ಬರಿಗು ಸೇರಿದ್ದು. ಬರಗಾಲ ಬಂದಾಗ ಕಾವೇರಿ ಸಮಸ್ಯೆ ಶುರುವಾಗುತ್ತೆ. ಸಮಸ್ಯೆ ಬಂದಾಗ ಇಬ್ಬರನ್ನು ಕುಳಿಸಿ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಆದರೆ ದುರದೃಷ್ಟಕರ ಪ್ರಾಧಿಕಾರ ಹೇಳುವ ಮುನ್ನವೇ ನೀರು ಹರಿಸಿದ್ದಾರೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಪ್ರತಿವರ್ಷ ಕಾವೇರಿ ನದಿ ಸ್ವಚ್ಛಗೊಳಿಸುತ್ತೇವೆ. ಕಾವೇರಿ ಹೋರಾಟಕ್ಕೆ ಮಾತ್ರ ಬರುವ ಜನರಲ್ಲ ನಾವೂ. ಕಾವೇರಿ ಉಳಿವಿಗಾಗಿಯು ನಿರಂತರವಾಗಿ ಹೋರಾಟ ಮಾಡ್ತಿದ್ದೇವೆ ಎಂದರು.
ಕನ್ನಡದ ಮಣ್ಣಿನ ಮಕ್ಕಳಿಗೆ ಆಗುತ್ತುರುವ ಅನ್ಯಾಯವನ್ನ ಸಹಿಸಿಕೊಳ್ಳಲು ಆಗಲ್ಲ. ಪ್ರಧಾನಿ ಮಧ್ಯಸ್ಥಿಕೆಗಾಗಿ ಆಗ್ರಹ ವಿಚಾರ. ಇಬ್ಬರ ನಡುವೆ ಜಗಳ ನಡೆದ್ರೆ ಜಗಳ ಬಿಡಿಸೋಕೆ ಬರಬೇಕು. ಆದ್ರೆ ಇಲ್ಲಿ ಜಗಳವೆ ಇಲ್ಲ, ಹೇಗೆ ಪ್ರಧಾನಿ ಬರಲು ಸಾಧ್ಯ ಎಂದು ಪ್ರಶ್ನಿಸಿದರು.
ತಮಿಳುನಾಡು ನೀರು ಕೇಳುವ ಮುನ್ನವೇ ಕರ್ನಾಟಕದವರು ನೀರು ಬಿಟ್ಟಿದ್ದಾರೆ. ಇಬ್ಬರು ಸೆಟಲ್ ಆಗಿರುವಾಗ ಯಾರು ಮಧ್ಯಪ್ರವೇಶ ಮಾಡ್ತಾರೆ. ಮುಖ್ಯಮಂತ್ರಿಗಳು ಪ್ರಧಾನಿ ಮಧ್ಯಸ್ಥಿಕೆಗೆ ಟ್ವಿಟ್ ಮೇಲೆ ಟ್ವೀಟ್ ಮಾಡ್ತಾರೆ. ಅಲ್ಲ ಕಣಪ್ಪ ರಾತ್ರೋ ರಾತ್ರಿ ನೀರು ಬಿಟ್ಟು ಪ್ರಧಾನಿ ಕರೆದ್ರೆ ಹೇಗೆ.? ಎಲ್ಲಿವರೆಗೆ ಮಗು ಅಳಲ್ಲ, ಅಲ್ಲಿಯವರೆಗೆ ತಾಯಿ ಹಾಲು ಕೊಡಲ್ಲ.ಅದಕ್ಕೆ ನಾವೂ ಇಂದು ನೀರಿಗಾಗಿ ಹೋರಾಟ ಮಾಡ್ತಿದ್ದೀವಿ ಎಂದು ಕಿಡಿಕಾರಿದರು.
ಇವತ್ತು ಕೇಂದ್ರ ಮಧ್ಯಸ್ಥಿಕೆ ವಹಿಸಿದ್ರೆ ಮುಂದೆ ರಾಜ್ಯ ಸರ್ಕಾರ ನೀರನ್ನ ಚೀನಾ, ಪಾಕಿಸ್ತಾನಕ್ಕು ಕೊಡ್ತಿರಾ. ನಿಮ್ಮ ದೋಸ್ತಿ, ಮೈತ್ರಿ ಉಳಿಸಿಕೊಳ್ಳಲು ನೀರು ಬಿಡುತ್ತಿದ್ದೀರಾ ಎಂದು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.