ಬೆಂಗಳೂರು: ರಾಜ್ಯದಲ್ಲಿ ಮಳೆ ಬರಲಿಲ್ಲವೆಂದು ಕಾಂಗ್ರೆಸ್ ಸರ್ಕಾರದಿಂದ ಸಾಕಷ್ಟು ಲೋಡ್ ಶೆಡ್ಡಿಂಗ್ (ಪವರ್ ಕಟ್) ಮಾಡಲಾಗ್ತಿದೆ ಇದೆ ಅಂತಾ ಸುದ್ದಿ ಆಗ್ತಿದೆ. ಆದರೆ ಪವರ್ ಕಟ್ ಮಾಡ್ತಾ ಇಲ್ಲ. ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲ ,ದುರಸ್ತಿ ಕಾರ್ಯ ಇರೋದ್ರಿಂದ ವಿದ್ಯುತ್ ಪೂರೈಕೆಯಲ್ಲಿ ಕೊಂಚ ವ್ಯತ್ಯಯ ಆಗಿದೆ. ಮಳೆ ಬಾರದಿದ್ದರೂ ಸದ್ಯಕ್ಕೆ ಲೋಡ್ ಶೆಡ್ಡಿಂಗ್ ಮಾಡೋಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟೀಕರಣ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಇಂದು ಮಂಗಳವಾರ ಈ ಕುರಿತು ಮಾತನಾಡಿದರು, ನಮ್ಮ ರಾಜ್ಯದಲ್ಲಿ ಮಳೆ ಇಲ್ಲ. ಆದರೂ ಬೇಡಿಕೆ ಹೆಚ್ಚಾಗಿದೆ. ಮಳೆಗಾಲದಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಥರ್ಮಲ್ ಪವರ್ ಸೆಂಟರ್, ದುರಸ್ತಿ ನಡೀತಾ ಇದೆ. ಕಳೆದ ಮೂರ್ನಾಲ್ಕು ದಿನಗಳಿಂದ ಹೀಗಾಗ್ತಿದೆ. ಲೋಡ್ ಶೆಡ್ಡಿಂಗ್ ಮಾಡೊದಾದ್ರೆ ನಾವು ಅನೌನ್ಸ್ ಮಾಡ್ತಿವಿ. ದಿನ ೪೦ ಕೋಟಿ ವಿದ್ಯುತ್ ಖರೀದಿ ಮಾಡ್ತಿವಿ. ಮಳೆ ಬಂದ್ರೆ ಈ ಸಮ್ಯಸೆ ನಿವಾರಣೆ ಆಗುತ್ತದೆ. ಮಳೆ ಇಲ್ಲ ಅಂದರು ಪವರ್ ಕಟ್ (ಲೋಡ್ ಶೆಡ್ಡಿಂಗ್) ಮಾಡೋಲ್ಲ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸಾಕಷ್ಟು ಪಾದಚಾರಿ ಮಾರ್ಗಗಳಲ್ಲಿ ಟ್ರಾನ್ಸ್ ಫಾರ್ಮರ್ಸ್ ಇವೆ. ಸಮ್ಯಸೆ ಆಗೋ ಟ್ರಾನ್ಸ್ ಫಾರ್ಮರ್ಸ್ ಶಿಫ್ಟ್ ಮಾಡಲು ಪಾಲಿಕೆ ಕ್ರಮ ಕೈಗೊಂಡಿದೆ. ಬೆಸ್ಕಾಂ ,ಸ್ಥಳೀಯ ಶಾಸಕರು, ಪಾಲಿಕೆ ಉತ್ತಮ ಕೆಲಸ ಮಾಡಿದೆ. ಒಟ್ಟು ೨ ಕೋಟಿ ರೂ. ಅಂದಾಜು ವೆಚ್ಚ ಆಗಿದೆ. ಪಾಲಿಕೆಯಿಂದ ಕೂಡ ಅನುದಾನ ಸಿಕ್ಕಿದೆ. ಮಳೆ ಬಂದರೆ ,ಒಂದು ವಾರ ಹತ್ತು ದಿನದಲ್ಲಿ ಮಳೆ ಬರುತ್ತದೆ. ಲೋಡ್ ಶೆಡ್ಡಿಂಗ್ ಮಾಡುವ ಅವಕಾಶವಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.