Sunday, April 20, 2025
Google search engine

Homeರಾಜ್ಯಸುದ್ದಿಜಾಲಪ್ರತಿಯೊಂದು ಜಾನಪದ ಕಲೆ ಮನುಷ್ಯನ ಜೀವನಕ್ಕೆ ಪ್ರೇರಣೆ : ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ

ಪ್ರತಿಯೊಂದು ಜಾನಪದ ಕಲೆ ಮನುಷ್ಯನ ಜೀವನಕ್ಕೆ ಪ್ರೇರಣೆ : ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ

ರಾಮನಗರ: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ವಿದ್ಯಾರ್ಹತೆಯು ಬೇಡ, ಯಾರು ಬೇಕಾದರೂ ಜಾನಪದ ಜ್ಞಾನವನ್ನು ಪ್ರದರ್ಶನ ಮಾಡಲು ಅವಕಾಶವಿದೆ ಎಂದು ಶ್ರೀ ಆದಿಚುಂಚನಗಿರಿ ರಾಮನಗರ ಶಾಖಾಮಠದ ಶ್ರೀ ಶಿವಗಿರಿಕ್ಷೇತ್ರ ಪೀಠಾಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಅವರು ತಿಳಿಸಿದರು.

ಅವರು ಇಂದು ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಸೌರಭ ಕಾಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಳ್ಳಿಯ ಜನರು ರಾಗಿ ಬೀಸುವಾಗ, ಕಳೆ ಕೀಳುವ ಸಮಯದಲ್ಲಿ ಹಲವು ಪದಗಳನ್ನು ಮತ್ತು ಸೋಬಾನೆ ಪದಗಳನ್ನು ಹಾಡುತ್ತಿದ್ದರು ಇವುಗಳು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದೆ. ಆದ್ದರಿಂದ ಯುವ ಪೀಳಿಗೆಯು ಈ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಂತೆ ತಿಳಿಸಿದರು.ಜಾನಪದ ಕಲೆಯೊಳಗೆ ೬೪ಕ್ಕೂ ಹೆಚ್ಚು ವಿಧಗಳಿವೆ. ಪ್ರತಿಯೊಂದು ಕಲೆಯು ಕೂಡ ಮನುಷ್ಯನ ಬದಲಾವಣೆಗೆ ಅತ್ಯಂತ ಅಮೂಲ್ಯವಾದುದು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸಹ ಒಂದಲ್ಲ ಒಂದು ರೀತಿಯ ಕಲೆ ತುಂಬಿದೆ, ಅದನ್ನು ಹೊರ ಬರುವುದು ಇಂತಹ ಕಾರ್ಯಕ್ರಮಗಳ ಮೂಲಕ ಎಂದರು.

ಕಲಾವಿದರು ಹಿಂದಿನ ಕಾಲದ ಚರ್ಮದ ವಾದ್ಯಗಳನ್ನು ಬಳಸಬೇಕು ಅದು ಬಹಳ ಮಧುರವಾಗಿತ್ತು ಸೊಗಸಾಗಿ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ಹಾಗೂ ನಾಡಹಬ್ಬಗಳಲ್ಲಿ ನಮ್ಮ ಸಂಸೃತಿಯನ್ನು ಹೊರ ತೆಗೆಯುವಂತಹ ಕಾರ್ಯವಾಗಬೇಕು ಎಂದು ತಿಳಿಸಿದರು. ತಾಲ್ಲೂಕು ಪಂಚಾಯತ್ ಸದಸ್ಯರಾದ ಮಾದೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಚಿಕ್ಕಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಮೇಶ್ ಬಾಬು, ಕೋಡಿಹಳ್ಳಿ ಶ್ರೀ ಶಾರದ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಪ್ರಭಾಕರ್ ಬಿ., ಕಾರ್ಯದರ್ಶಿಗಳಾದ ಗಣೇಶ್, ಕಲಾವಿದರು ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular