Friday, April 18, 2025
Google search engine

Homeರಾಜ್ಯಸುದ್ದಿಜಾಲದೇಶ ಮತ್ತು ಸನಾತನ ಧರ್ಮ ಉದ್ದಾರವಾಗಬೇಕಾದರೆ ಪ್ರತಿಯೊಬ್ಬ ಭಾರತೀಯನು ಎಚ್ಚರನಾಗಬೇಕು: ಕು. ಹಾರಿಕಾ ಮಂಜುನಾಥ್

ದೇಶ ಮತ್ತು ಸನಾತನ ಧರ್ಮ ಉದ್ದಾರವಾಗಬೇಕಾದರೆ ಪ್ರತಿಯೊಬ್ಬ ಭಾರತೀಯನು ಎಚ್ಚರನಾಗಬೇಕು: ಕು. ಹಾರಿಕಾ ಮಂಜುನಾಥ್

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ದೇಶ ಮತ್ತು ಸನಾತನ ಧರ್ಮ ಉದ್ದಾರವಾಗಬೇಕಾದರೆ ಪ್ರತಿಯೊಬ್ಬ ಭಾರತೀಯನು ಎಚ್ಚರನಾಗಬೇಕು ಎಂದು ಧರ್ಮ ಮತ್ತು ಸಂಸ್ಕೃತಿಯ ಪ್ರಚಾರಕಿ ಕು. ಹಾರಿಕಾ ಮಂಜುನಾಥ್ ಹೇಳಿದರು. ಪಟ್ಟಣದ ಸಾರ್ವಜನಿಕ ಹನುಮ ಜಯಂತಿ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಪುರಸಭೆ ಬಯಲು ರಂಗಮಂದಿರದ ಆವರಣದಲ್ಲಿ ಆಯೋಜಿಸಿದ್ದ ಧರ್ಮ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನಮ್ಮೆಲ್ಲರಿಗೂ ಜಾತಿಗಿಂತ ಹಿಂದುತ್ವ ಮುಖ್ಯವಾಗಬೇಕು ಎಂದರು.

ಹಿಂದುಗಳು ಜಾತಿ ಮತ್ತು ಒಳ ಜಾತಿಗಳ ಜಗಳದಲ್ಲಿ ನಿರತರಾದರೆ ಭವಿಷ್ಯದಲ್ಲಿ ಸಂಕಷ್ಟದ ದಿನಗಳು ಎದುರಾಗಿ ನಾವು ಅಲ್ಪಸಂಖ್ಯಾತರಾಗುವ ಸಮಯ ಬರುವ ಸಾಧ್ಯತೆ ಇರುವುದರಿಂದ ಈ ವಿಚಾರದಲ್ಲಿ ಎಲ್ಲರೂ ಜಾಗೃತರಾಗಬೇಕು ಎಂದು ತಿಳಿಸಿದರು.

ಮರ್ಯಾದ ಪುರುಷ ಶ್ರೀ ರಾಮನಿಗೆ ಮತ್ತು ರಘುವಂಶಕ್ಕೆ ಜಯ ತಂದುಕೊಟ್ಟ ಹನುಮಂತ ಅಜರಾಮರನಾಗಿದ್ದು ಸರ್ವಶಕ್ತಿ ಮತ್ತು ಎಲ್ಲಾ ಕಾರ್ಯಗಳಿಗೂ ನಮಗೆಲ್ಲ ಆತನೇ ಕಾರಣ ಮತ್ತು ಪ್ರೇರಣೆಯಾಗಿರುವುದರಿಂದ ಆ ಭಗವಂತನನ್ನು ನಾವು ಸದಾ ಪೂಜಿಸಬೇಕು ಎಂದು ನುಡಿದರು.

ಭಾರತೀಯರು ದೇಶ ಮತ್ತು ಭಾಷೆಯ ವಿಚಾರ ಬಂದಾಗ ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದು ನುಡಿದ ಅವರು ಪ್ರಸ್ತುತ ವಾಯುಪುತ್ರ ಹನುಮಂತನ ಆದರ್ಶ ಅತ್ಯಂತ ಅಗತ್ಯವಾಗಿದ್ದು ಸ್ವಾರ್ಥಕ್ಕೋಸ್ಕರವಾದರೂ ಸಮಸ್ತ ಹಿಂದೂಗಳು ಜಾಗೃತರಾಗಿ ನಡೆದುಕೊಳ್ಳಬೇಕೆಂದರು.

ಹಿಂದೂಗಳಿಗೆ ಹನುಮಂತನಂತೆ ಅವರ ಶಕ್ತಿ ಮತ್ತು ಸಾಮರ್ಥ್ಯದ ಅರಿವು ಗೊತ್ತಿಲ್ಲ ವಾಯುಪುತ್ರನಿಗೆ ಜಾಂಬವಂತ ಆತನ ಸಾಮರ್ಥ್ಯದ ಬಗ್ಗೆ ತಿಳಿಸಿದಂತೆ ನಮಗೆ ಯಾರು ಹೇಳಿಕೊಡುವುದಿಲ್ಲಾ ಆದರೆ ಅದು ನಮ್ಮ ಅರಿವಿಗೆ ಬಂದು ಎಲ್ಲರೂ ಒಂದಾದರೆ ನಮ್ಮನ್ನು ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲಾ ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕಾದರೆ 500 ವರ್ಷಗಳ ಸುದೀರ್ಘ ಕಾಲ ಹಿಡಿಯಿತು ಇದಕ್ಕೆ ನಮ್ಮಲ್ಲಿರುವ ಸಂಘಟನೆಯ ಕೊರತೆಯೇ ಕಾರಣವಾಗಿದ್ದು ಮುಂದಾದರು ಪರಸ್ಪರ ದ್ವೇಷ ಮತ್ತು ಅಸೂಯೆಯನ್ನು ಮರೆತು ಧರ್ಮ ಹಾಗೂ ಹಿಂದುತ್ವವನ್ನು ಕಾಪಾಡಲು ಕೆಲಸ ಮಾಡಬೇಕೆಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಹನುಮ ಜಯಂತಿ ಆಚರಣೆ ಸಮಿತಿ ಅಧ್ಯಕ್ಷ ಯು ಕೃಷ್ಣ ಭಟ್ ಮಾತನಾಡಿ ಸನಾತನ ಧರ್ಮ ಮತ್ತು ಹಿಂದುತ್ವಕ್ಕೆ ಧಕ್ಕೆಯಾದರೆ ನಾವು ನಮ್ಮ ಪ್ರಾಣ ಕೊಡಲು ಸಿದ್ದರಾಗಿರಬೇಕು ಎಂದು ಕರೆ ನೀಡಿದರು.
ಮಂತ್ರ ಮುಗ್ದರನ್ನಾಗಿಸಿದ ಕು.ಹಾರಿಕಾ- ಪಟ್ಟಣದಲ್ಲಿ ನಡೆದ ಧರ್ಮ ಪ್ರಚಾರ ಸಭೆಯಲ್ಲಿ ಮಾತನಾಡಿದ ಕು. ಹಾರಿಕಾಮಂಜುನಾಥ್ ನೆರೆದಿದ್ದ ಸಾವಿರಾರು ಮಂದಿಯನ್ನು ತಮ್ಮ ವಾಗ್ಚರಿಯ ಮೂಲಕ ಮಂತ್ರ ಮುಗ್ದರನ್ನಾಗಿಸಿದರು.

ನಿರಂತರವಾಗಿ 70 ನಿಮಿಷಗಳ ಕಾಲ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ರಾಮಾಯಣ, ಮಹಾಭಾರತ ಮತ್ತು ವೇದ ಋಗ್ವೇದಗಳ ಉದಾಹರಣೆ ಸಹಿತ ವಿವರಿಸಿದ ಅವರು ಸಭಿಕರ ಚಪ್ಪಾಳೆ ಗಿಟ್ಟಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಹನುಮ ಜಯಂತಿ ಉತ್ಸವ ಸಮಿತಿಯ ವತಿಯಿಂದ ಕು.ಹಾರಿಕಾಮಂಜುನಾಥ್ ಅವರಿಗೆ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸಮಿತಿಯ ಪದಾಧಿಕಾರಿಗಳಾದ ನಂಜುಂಡ, ಪವನ್ ಶಿವಾಜಿ, ರಾಜು ಅವಿನಾಶ್, ಮನು, ಆದರ್ಶ್, ಸಂಕರ್ಷಣ್, ಕೃಷ್ಣಮೂರ್ತಿ, ರಾಜುಭವಾರ್, ವಿನಯ್ ಬಾಂಬೋರೆ, ಬೌನ್ಸ್ ಮಂಜು ಮತ್ತಿತರರು ಇದರು,

RELATED ARTICLES
- Advertisment -
Google search engine

Most Popular