Saturday, April 5, 2025
Google search engine

Homeರಾಜ್ಯಸುದ್ದಿಜಾಲಗಾಂಧೀಜಿಯವರ ತತ್ವ ಆದರ್ಶಗಳನ್ನ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಿ-ಡಾ. ಎಚ್.ಕೆ ಮರಿಯಪ್ಪ

ಗಾಂಧೀಜಿಯವರ ತತ್ವ ಆದರ್ಶಗಳನ್ನ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಿ-ಡಾ. ಎಚ್.ಕೆ ಮರಿಯಪ್ಪ

ಮದ್ದೂರು: ಗಾಂಧೀಜಿಯವರ ಅಹಿಂಸಾತ್ಮಕ ತತ್ವಗಳು ವಿಶ್ವಮಾನ್ಯತೆ ಪಡೆದಿದ್ದು ಪ್ರತಿಯೊಬ್ಬರು ಕೂಡಾ ಅವರ ತತ್ವ ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಎಚ್.ಕೆ.ವೀರಣ್ಣಗೌಡ ಟ್ರಸ್ಟ್ ಅಧ್ಯಕ್ಷ ಅನಿವಾಸಿ ಭಾರತೀಯ ಡಾ. ಎಚ್.ಕೆ ಮರಿಯಪ್ಪ ಹೇಳಿದರು.
ಪಟ್ಟಣದ ಶಿವಪುರ ಧ್ವಜಸತ್ಯಾಗ್ರಹ ಸೌಧದಲ್ಲಿ ಎಂ.ಹೆಚ್. ಚನ್ನೇಗೌಡ ವಿದ್ಯಾನಿಲಯ ಹಾಗೂ ಎಚ್.ಕೆ. ವೀರಣ್ಣಗೌಡ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಆಯೋಜಿಸಿದ್ದ 154ನೇ ಗಾಂಧಿ ಜಯಂತಿ ಮತ್ತು 119ನೇ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಧ್ವಜರೋಹಣ ನೆರವೇರಿಸಿ ಅವರು ಮಾತನಾಡಿದರು.
ಗಾಂಧಿಜಿಯವರು ದೇಶದ ಒಳಗೆ ಹಾಗೂ ಹೊರಗೆ ಅಹಿಂಸಾತ್ಮಕ ಪ್ರತಿರೋಧದ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸಿ ಸರಳತೆ ಮತ್ತು ಸ್ವಾವಲಂಭನೆಯ ಮೂಲಕ ಜಾಗತಿಕವಾಗಿ ಪ್ರಭಾವ ಬೀರಿದ್ದಾರೆ ಎಂದ ಅವರು ಗಾಂಧೀಜಿಯವರ ಮಾರ್ಗದರ್ಶನವನ್ನು ಪಡೆದಂತಹ ಭಾರತೀಯರಾದ ನಾವು ಧನ್ಯವಂತರು ಎಂದು ಅವರು ಹೇಳಿದರು.
ದೇಶದ ಎರಡನೇ ಪ್ರಧಾನಿಯಾದ ಲಾಲ್ ಬಹುದ್ದೂರ್‌ಶಾಸ್ತ್ರಿ ರವರು ಸರಳ ವ್ಯಕ್ತಿತ್ವದಿಂದ ದೇಶವನ್ನಾಳಿ ಹಸಿರು ಕ್ರಾಂತಿಯ ಹರಿಕಾರರಾದ ಶಾಸ್ತ್ರಿ ರವರು ದೇಶ ರಕ್ಷಣೆಯಲ್ಲಿ ದಿಟ್ಟ ತೀರ್ಮಾನಗಳನ್ನ ತೆಗೆದುಕೊಂಡಿರುವುದು ಇಂದಿನ ನಾಯಕರುಗಳಿಗೆ ಮಾದರಿಯಾಗಬೇಕೆಂದರು.
ಗಾಂಧಿಜಿಯವರ ಅಹಿಂಸಾ ತತ್ವವನ್ನ ಸರಿಯಾದ ರೀತಿಯಲ್ಲಿ ಅಧ್ಯಾಯನ ಮಾಡದೇ ಇರುವುದು ಯುವಕರಲ್ಲಿ ಹಿಂಸಾತ್ಮಕ ಪ್ರವೃತ್ತಿ ಹಾಗೂ ಜಾಗತೀಕ ಸಂಘರ್ಷಕ್ಕೆ ಕಾರಣವಾಗಿದ್ದು ಗಾಂಧೀಜಿಯವರ ಹಾಗೂ ಶಾಸ್ತ್ರಿ ರವರ ತತ್ವ ಆದರ್ಶಗಳನ್ನ ಜೀವನ ಶೈಲಿಯನ್ನ ಮೈಗೊಡಿಸಿಕೊಂಡು ಶಾಂತಿಪ್ರಿಯ ಹಾಗೂ ಬಲಿಷ್ಟ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕೆಂದು ಕಿವಿ ಮಾತು ಹೇಳಿದರು.
ಈ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು, ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಅಧ್ಯಕ್ಷ ಎಂ.ಸ್ವರೂಪ್ ಚಂದ್, ಕಾರ್ಯದರ್ಶಿ ಸಿ. ಅಪೂರ್ವಚಂದ್ರ, ಅಮೇರಿಕಾದ ಖ್ಯಾತ ವೈದ್ಯರುಗಳಾದ ಡಾ. ಎಚ್.ಜಿ. ಏಕನಾಥ್, ಶ್ರೀಮತಿ ಗೀತಾ ಏಕನಾಥ್, ಡಾ. ಬಿ.ಎಂ. ರಾಮ್, ಡಾ. ಅಂಜನ ಕುಮಾರಿ, ಸಾರ್ವಜನಿಕ ವಿದ್ಯಾಸಂಸ್ಧೆಯ ಅಧ್ಯಕ್ಷ ಜಯಮುದ್ದಪ್ಪ, ಭೈರಮಂಗಲ ರಾಮೇಗೌಡ, ಪ್ರಾಂಶುಪಾಲರಾದ ಜಿ.ಎಸ್. ಶಂಕರೇಗೌಡ, ಯು.ಎಸ್. ಶಿವಕುಮಾರ್, ಉಪಪ್ರಾಂಶುಪಾಲರಾದ ಪ್ರಕಾಶ್, ಜಿ.ಎಸ್.ನಂದಿನಿ, ಮುಖ್ಯ ಶಿಕ್ಷಕರಾದ ಎನ್.ಕೃಷ್ಣ, ಎಂ.ಟಿ.ಚಂದ್ರಶೇಖರ್, ಕೆ.ಎನ್. ವರದರಾಜು, ಆಡಳಿತಾಧಿಕಾರಿ ಯು.ಎಸ್. ರವಿ. ಹಾಗೂ ರಾ.ಸೇಯೋ ಕಾರ್ಯಕ್ರಮಾಧಿಕಾರಿಗಳಾದ ಹೆಚ್.ಎಸ್.ಪಂಚಲಿಂಗೇಗೌಡ, ಎ.ವಿ. ಪ್ರದೀಪ್ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular