ಚನ್ನಪಟ್ಟಣ: ಸ್ವಚ್ಚತೆ ಹಾಗೂ ದೇಶಪ್ರೇಮದ ಬಗ್ಗೆ ಪ್ರತಿಯೊಬ್ಬರಲ್ಲಿ ಜಾಗೃತಿ ಇರಬೇಕು ಎಂದು ಪುರ ಪೊಲೀಸ್ ಠಾಣೆ ಪಿಎಸ್‌ಐ ಹರೀಶ್ ಅವರು ಅಭಿಪ್ರಾಯಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡರ ನೇತೃತ್ವದಲ್ಲಿ ಪಟ್ಟಣದ ತೋಟಗಾರಿಕೆ ಇಲಾಖೆಯ ಬಳಿ ಆಯೋಜಿಸಿದ್ದ ಪಟ್ಟಣದಲ್ಲಿ ಹೆಚ್ಚು ಕಸ ಹಾಕುವ ಜಾಗದಲ್ಲಿ ಎಸ್. ಚಿಕ್ಕರಾಜುರವರು ಗಿಡನೆಟ್ಟು ಕಸದ ರಾಶಿಗೆ ಮುಕ್ತಿ ನೀಡುವ ಜೊತೆಗೆ ಕಸ ಮುಕ್ತ ಪಟ್ಟಣ ನಿರ್ಮಾಣ ಮಾಡುವ ಅಭಿಯಾನದಲ್ಲಿ ಗಿಡಗಳನ್ನು ಹಂಚಿಕೆ ಮಾಡಿ ಅವರು ಮಾತನಾಡಿದರು. ನಮ್ಮ ಮನೆಯ ಸುತ್ತಲೂ ನಾವು ಸ್ವಚ್ಚತೆ ಮಾಡಿದರೆ ಕೆಲವರು ಟೀಕೆ ಮಾಡುವುದು ಸಹಜ. ನಮ್ಮ ಸುತ್ತಲ ಪರಿಸರದ ಸ್ವಚ್ಚತೆ ಬಗ್ಗೆ ನಮ್ಮಲ್ಲೇ ಅಸಡ್ಡೆ ಮೂಡಿದರೆ ಅದು ನಮ್ಮ ಕುಟುಂಬದವರ ಆರೋಗ್ಯವನ್ನು ನಾವೇ ಅನಾರೋಗ್ಯದ ದಾರಿಗೆ ನೂಕಿದಂತೆ. ಈ ನಿಟ್ಟಿನಲ್ಲಿ ಯಾರದೇ ಟೀಕೆಗೆ ಮಣಿಯದೆನಮ್ಮ ಸುತ್ತಲು ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಚ್ಚತೆಯ ಜವಾಬ್ದಾರಿ ಪಡೆಯಬೇಕು ಎಂದು ಕರೆ ನೀಡಿದರು.
ಇಂದು ದೇಶಪ್ರೇಮ ಎಂಬುದು ಕಡಿಮೆಯಾಗಿದೆ. ಸೈನಿಕರು ಎಂದರೆ ಸ್ವಾರ್ಥ ಸಾಧನೆಗೆ ತೆರಳಿದ್ದಾರೆ. ಎಂದುಕೊಳ್ಳುವವರೆ ಹೆಚ್ಚಿದ್ದಾರೆ. ಹಲವರು ಹೆಸರಿಗೆ ಮಾತ್ರ ದೇಶಪ್ರೇಮ ಅನ್ನುತ್ತಾರೆ ಆದರೆ ಅವರ ಮಕ್ಕಳನ್ನು ದೇಶಸೇವೆಗೆ ಕಳಿಸಿದ ಉದಾಹರಣೆ ಇಲ್ಲ. ವೈದ್ಯರ ಮಕ್ಕಳು ವೈದ್ಯರಾಗಬೇಕು, ಇಂಜಿನಿಯರ್ ಮಕ್ಕಳು ಇಂಜಿನಿಯರ್ ಆಗಬೇಕು, ಪೊಲೀಸರ ಮಕ್ಕಳು ಪೊಲೀಸರೆ ಆಗಬೇಕು ಎಂಬಂತಾಗಿದೆ. ಇದರಿಂದ ನಮ್ಮ ಸೈನಿಕರಿಗೆ ಇರುವ ಗೌರವದ ಬಗ್ಗೆ ಜನಸಾಮಾನ್ಯರಿಗೆ ಅರಿವಿಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂದರ್ಭದಲ್ಲಿ ಗೋಡೆ ಬರಹದ ಮೂಲಕ ಕಸದ ರಾಶಿಯ ಕರಗಿಸಿ ಗಿಡನೆಟ್ಟು-ಗೋಡೆಯ ಮೇಲೆ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ಮುಂದಾಗಿರುವ ಪಟ್ಟಣದ ಚಲುವರಾಯಸ್ವಾಮಿ ಪೌಲ್ಟ್ರಿ ಫಾರಂನ ಮಾಲೀಕರಾದ ಎಸ್. ಚಿಕ್ಕರಾಜುಅವರಿಗೆ, ಈ ವಾರ್ಡ್‌ನಲ್ಲಿ ನಿತ್ಯ ಸ್ವಚ್ಚತೆ ಕಾರ್ಯ ಮಾಡುವ ಪೌರಕಾರ್ಮಿಕರಿಗೆ, ನಗರದ ಸೌಂದರ್ಯ ಹೆಚ್ಚುವಂತೆ ವಿವಿಧ ಗಿಡಗಳನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಿರುವ ನರ್ಸರಿ ರವಿ ಅವರಿಗೆ, ಕಸಮುಕ್ತ ನಗರವಾಗಿಸಲು ಪಣ ತೊಟ್ಟಿರುವ ಒನ್ ಭೂಮಿ ಪೌಂಡೇಷನ್‌ನ ಬಾಲಸುಬ್ರಹ್ಮಣ್ಯ ಮತ್ತು ನವನೀತ್‌ರವರಿಗೆ, ಪರಿಸರದ ಬಗ್ಗೆ ಕಾಳಜಿ ಉಳ್ಳ ಡಾ. ಮಲವೇಗೌಡರಿಗೆ, ಕಸಮುಕ್ತ ನಗರವನ್ನಾಗಿಸಲು ಪ್ರೇರೇಪಿಸುತ್ತಿರುವ ಸಮಾಜ ಸೇವಕ ಧರಣೀಶ್ ಮತ್ತು ಡಿಎಸ್‌ಎಸ್ ವೆಂಕಟೇಶ್‌ಅವರಿಗೆ, ನಗರಸಭಾ ಸದಸ್ಯ ಸತೀಶ್‌ಬಾಬು ಅವರಿಗೆ, ಪ್ಲಾಸಿಕ್ಟ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಎಲೇಕೇರಿ ರವೀಶ್ ಮತ್ತು ಎಲೇಕೇರಿ ಮಂಜುನಾಥ್‌ಅವರಿಗೆ ಹಾಗೂ ಪಟ್ಟಣದ ಸ್ವಚ್ಚತೆಯ ಹೊಣೆ ಹೊತ್ತ ಪರಿಸರದ ಅಭಿಯಂತರೆ ಮೀನಾಕ್ಷಿ ಪೌರಕಾರ್ಮಿಕರಾದ ಚಂದ್ರಶೇಖರ್, ವಿ. ಲಿಂಗರಾಜು, ಪಾರ್ವತಮ್ಮ ಅವರಿಗೆ ಸನ್ಮಾನಿಸಲಾಯಿತು.
ಸಂದರ್ಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ್, ಕಲ್ಪವೃಕ್ಷ ಸಹಕಾರ ಪತ್ತಿನ ಸಹಕಾರ ಸಂಘದ ನಾಗವಾರ ಬಿಳಿಯಪ್ಪ, ಜೀವ ವಿಮಾ ಪ್ರತಿನಿಧಿ ಎಲ್.ಐ.ಸಿ. ನಾಗರಾಜ್, ಕಾಂಗ್ರೆಸ್ ಧುರೀಣ ಪಿ.ಡಿ. ರಾಜು, ನಾಗವಾರ ಶಿವಲಿಂಗೇಗೌಡ, ಪಾಲಿಷ್ ರಾಜು, ಅಕ್ಕೂರ್ ಶೇಖರ್, ಶಿವಲಿಂಗಯ್ಯ ಉ. ಕುಳ್ಳಪ್ಪ, ಬೈರಾಪಟ್ಟಣ ಕಿಟ್ಟಿ, ಲೋಕೆಶ್, ಕೃಷ್ಣಾಚಾರ್, ಚಂದ್ರಶೇಖರ್ ಲಯನ್ ತಿಪ್ರೇಗೌಡ, ಉಪಸ್ಥಿತರಿದ್ದರು.
