Monday, December 2, 2024
Google search engine

Homeಆರೋಗ್ಯಭಾರತ 2030 ರೊಳಗೆ ರೇಬಿಸ್ ಮುಕ್ತ ದೇಶವಾಗಲು ಎಲ್ಲರೂ ಕೈಜೋಡಿಸಬೇಕಿದೆ: ಡಾ.ಡಿ.ನಟರಾಜು

ಭಾರತ 2030 ರೊಳಗೆ ರೇಬಿಸ್ ಮುಕ್ತ ದೇಶವಾಗಲು ಎಲ್ಲರೂ ಕೈಜೋಡಿಸಬೇಕಿದೆ: ಡಾ.ಡಿ.ನಟರಾಜು

ತಾಲೂಕು ಆರೋಗ್ಯಾಧಿಕಾರಿ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ರೇಬಿಸ್ ದಿನಾಚರಣೆ ಕಾರ್ಯಕ್ರಮ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ..ಆರ್.ನಗರ : ಪ್ರಧಾನ ಮಂತ್ರಿಗಳ ಆಶಯದಂತೆ ಭಾರತ ದೇಶ 2030 ರೊಳಗೆ ರೆಬೀಸ್ ಮುಕ್ತ (ನಾಯಿ ಕಡಿತದಿಂದ) ದೇಶವಾಗಬೇಕಿದೆ. ಅದಕ್ಕಾಗಿ ಎಲ್ಲರೂ ಕೈಜೋಡಿಸ ಬೇಕಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು ತಿಳಿಸಿದರು. ಅವರು ಪಟ್ಟಣದ ತಾಲೂಕು ಪಂಚಾಯತಿಯ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ರೇಬಿಸ್ ದಿನಾಚರಣೆ ಕಾರ್ಯಕ್ರಮ ಕುರಿತು ಮಾತನಾಡಿದರು.

ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ, 1271 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು, ಯಾವುದೇ ಹುಚ್ಚು ನಾಯಿ ಕಡಿತ ವರದಿಯಾಗಿಲ್ಲ ಎಂದರಲ್ಲದೆ ಪ್ರತಿ ವರ್ಷ ಭಾರತದಲ್ಲಿ 2000 ಜನ, ಹುಚ್ಚು ನಾಯಿ ಕಡಿತದಿಂದ ಸಾಯುತ್ತಿದ್ದಾರೆ. ಹುಚ್ಚು ನಾಯಿ ಕಡಿದ 6 ದಿನದಿಂದ 2 ವರ್ಷಗಳವರೆಗೆ ರೋಗ ಕಾಣಿಸಿ ಕೊಳ್ಳಬಹುದು. ಸರಿಯಾದ ಚಿಕಿತ್ಸೆ ಪಡೆಯ ಬೇಕು ಎಂದರು.

2019 ರ ನಾಯಿ ಗಣತಿಯಂತೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನಲ್ಲಿ 5 ಸಾವಿರ ನಾಯಿಗಳಿದ್ದರೆ ಪಟ್ಟಣದಲ್ಲಿ ಎರಡು ಸಾವಿರ ನಾಯಿಗಳು ಇದೆ, ಆದ್ದರಿಂದ ರೇಬಿಸ್ ನಿಯಂತ್ರಣದಲ್ಲಿ ಗ್ರಾಮಪಂಚಾಯತ್, ಪುರಸಭೆಯ ಪಾತ್ರ ಬಹಳ ಮುಖ್ಯವಾದದು ಎಂದರು.

ರೇಬೀಸ್ ನಿಂದ ಉಂಟಾಗುವ ರೋಗ ಮಾರಣಾಂತಿಕ ಆದರೂ ಸಹ ತಡೆಗಟ್ಟಬಹುದಾಗಿದೆ ಎಂದರಲ್ಲದೆ
ನಾಯಿ ಕಡಿತ ಪ್ರಕರಣಗಳಿಗೆ ಲಭ್ಯವಿರುವ ಚಿಕಿತ್ಸಾ ವಿಧಾನದ ಬಗ್ಗೆ ಮಾಹಿತಿನೀಡಿದರು.

ಕಾರ್ಯಕ್ರಮದ ಉದ್ಘಾಟಿಸಿದ ತಾ..ಪಂ.ಇಓ ಕುಲದೀಪ್ ಮಾತನಾಡಿ ನಾಯಿಗಳ ಸಂತತಿ ನಿಯಂತ್ರಣದಲ್ಲಿ ಇರುವ ಸವಾಲುಗಳು ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು ತಿಳಿಸಿದರು. ನಾಯಿಗಳನ್ನು ದಿಟ್ಟಿಸಿ ನೋಡಬಾರದು. ಬೊಗಳುವಾಗ ಓಡಬಾರದು, ನಿಂತು ಕೂಗಬೇಕು. ಮಾಲೀಕರು ನಾಯಿಗಳ ಜೊತೆಯಲ್ಲಿರಬೇಕು. ಜನ ಇರುವ ಕಡೆ ನಾಯಿಗಳಿಗೆ ಆಹಾರ ಕೊಡಬಾರದು. ತಾಜ್ಯಗಳನ್ನು ಜನವಸತಿಯಿಂದ ದೂರ ಇಡಬೇಕು. ಹುಚ್ಚು ನಾಯಿಗಳನ್ನು ಗುರುತಿಸುವುದನ್ನು ಕಲಿಯಬೇಕೆಂದು ತಿಳಿಸಿದರು.

ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮಂಜುನಾಥ್ ಮಾತನಾಡಿ ಸಾಕು ಪ್ರಾಣಿಗಳಲ್ಲಿ ರೇಬಿಸ್ ಹರಡುವಿಕೆ, ರೇಬಿಸ್ ಸೋಂಕುಳ್ಳ ಪ್ರಾಣಿಗಳ ಗುಣಲಕ್ಷಣಗಳು ಹಾಗೂ ಮನುಷ್ಯನಿಗೆ ರೇಬಿಸ್ ಹರಡದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.

ವಿಶ್ವ ರೇಬೀಸ್ ದಿನವು ಈ ರೋಗದ ವಿರುದ್ಧ ನಡೆಯುತ್ತಿರುವ ಹೋರಾಟದ ನಿರ್ಣಾಯಕ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಸಾಮೂಹಿಕ ನಾಯಿ ಲಸಿಕೆಗಳು, ಉತ್ತಮ ಆರೋಗ್ಯ ವ್ಯವಸ್ಥೆಗಳು ಮತ್ತು ಶೈಕ್ಷಣಿಕ ಪ್ರಭಾವದ ಮೂಲಕ ರೇಬೀಸ್ ಅನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳನ್ನು ತೀವ್ರಗೊಳಿಸಲು ಜನರು ಸಹಕಾರ ನೂಡ ಬೇಕಿದೆ ಎಂದರು.

ಪಟ್ಟಣದ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ರಾಜೇಂದ್ರಕುಮಾರ್ ಮಾತನಾಇ ಒಂದು ನಾಯಿ ಹಿಡಿದು, ಸಂತಾನಹರಣ ಚಿಕಿತ್ಸೆ ಮಾಡಿ, ಮೂರು ದಿನದ ನಂತರ, ಬಿಡಲು, 1600 ರೂಪಾಯಿ ಟೆಂಡರ್ ಕರೆದರು ಇದುವರೆವಿಗೂ ಯಾರು ಅರ್ಜಿ ಹಾಕಿಲ್ಲ, ಕಳೆದ ಮೂರು ವರ್ಷಗಳಿಂದ ಟೆಂಡರ್ ಪ್ರಕ್ರಿಯೆ ನಡೆಯುತ್ತಿಲೆ ಇದೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಕೃಷ್ಣಮೂರ್ತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ‌ ಸಿ.ಎಂ. ರೇಖಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹೆಚ್.ಜೆ.ಮಹೇಶ್, ಆರೋಗ್ಯ ಕ್ಷೇತ್ರ ಕಾರ್ಯಕ್ರಮ ಅಧಿಕಾರಿ ರೇಖಾ, ಮಾಯಿಗೌಡನಳ್ಳಿ ಆರೋಗ್ಯ ಮಂದಿರದ ಸಿಎಚ್ಓ ಕುಪ್ಪೆ ಸಚಿನ್ ಹಾಗೂ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಆವಳಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಹಾಗು ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಇದ್ಸರು.

RELATED ARTICLES
- Advertisment -
Google search engine

Most Popular