Friday, April 11, 2025
Google search engine

Homeರಾಜ್ಯಪರಿಸರ ಸಂರಕ್ಷಣೆಗೂ ಪ್ರತಿಯೊಬ್ಬರು ಕಾಳಜಿ ವಹಿಸಬೇಕು: ಶಾಸಕ ಕೆ.ಎಂ.ಉದಯ್

ಪರಿಸರ ಸಂರಕ್ಷಣೆಗೂ ಪ್ರತಿಯೊಬ್ಬರು ಕಾಳಜಿ ವಹಿಸಬೇಕು: ಶಾಸಕ ಕೆ.ಎಂ.ಉದಯ್

ಮದ್ದೂರು: ಕುಟುಂಬದ ರಕ್ಷಣೆಯಂತೆ ಪರಿಸರ ಸಂರಕ್ಷಣೆಗೂ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಎಂದು ಶಾಸಕ ಕೆ.ಎಂ.ಉದಯ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ತಾಲೂಕಿನ ಸೋಮನಹಳ್ಳಿ ಗ್ರಾಮದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮ ನಿಮಿತ್ತ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಸಂರಕ್ಷಣೆಯ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು. ಪರಿಸರ ಉಳಿಸುವ ಮೂಲಕ ಮುಂದಿನ ಪೀಳಿಗೆಯವರು ನಿರ್ಭೀತಿಯಿಂದ ಹಾಗೂ ಅರೋಗ್ಯಯುತವಾಗಿ ಬದುಕಲು ಸಹಕಾರಿ ಮಾಡಿಕೊಡಬೇಕು ಎಂದರು.

ಅಭಿವೃಧ್ಧಿ ಮತ್ತು ವಿನಾಶ ಒಟ್ಟಿಗೆ ಸಾಗಬಾರದು, ಇರುವ ಒಂದು ಭೂಮಿಯನ್ನು ರಕ್ಷಿಸಲು ನಾವೆಲ್ಲ ಟೊಂಕಕಟ್ಟಿ ನಿಲ್ಲಬೇಕು. ಪರಿಸರ ಸ್ವಚ್ಛತೆಯ ಬಗ್ಗೆ ನಾವುಗಳು ಸೇರಿದಂತೆ ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸಬೇಕು. ನಮ್ಮ ನಮ್ಮ ಜವಾಬ್ದಾರಿಗಳನ್ನು ಅರಿತು ನಡೆದಾಗ ಮಾತ್ರ ಮುಂದಿನ ಜನಾಂಗಕ್ಕೆ ಉತ್ತಮ ಪರಿಸರ ನೀಡಿದಂತಾಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ, ಸದಸ್ಯ ಪ್ರೀತಂ, ಹನುಮೇಗೌಡ, ತಾಲೂಕು ವಲಯ ಅರಣ್ಯಾಧಿಕಾಗಳಾದ  ಗವಿಯಪ್ಪ, ಶೈಲೇಂದ್ರ ಕುಮಾರ್, ಉಪ ವಲಯ ಅರಣ್ಯಾಧಿಕಾರಿಗಳಾದ ರವಿ, ಕಾಂತರಾಜು, ಅಧಿಕಾರಿ ಸುದರ್ಶನ್, ಸಿದ್ದೇಗೌಡ, ಪ್ರಾಂಶುಪಾಲ ಪ್ರಕಾಶ್ ಬಾಬು, ಉಪನ್ಯಾಸಕರಾದ ಚನ್ನಂಕೇಗೌಡ, ಪ್ರತಾಪ್, ಪಿಡಿಒ ಶಂಭುಲಿಂಗಯ್ಯ, ಮುಖಂಡರಾದ ಅಪ್ಪೇಗೌಡ, ರಾಜೇಂದ್ರ, ಸುದೀ ಇದ್ದರು.

RELATED ARTICLES
- Advertisment -
Google search engine

Most Popular