ಮಂಡ್ಯ: ಸಮಿತಿ ಮತ್ತು ಪ್ರಾಧಿಕಾರದಿಂದಂತೂ ನ್ಯಾಯ ಸಿಗಲಿಲ್ಲ. ಸುಪ್ರೀಂ ಕೋರ್ಟ್ ಆದ್ರೂ ಕರ್ನಾಟಕದ ಪರ ತೀರ್ಪು ನೀಡುತ್ತಾ? ಎಂದು ಮಂಡ್ಯ ಜನತೆ ಕಾದು ಕುಳಿತಿದ್ದಾರೆ.
ಕಾವೇರಿ ಕೊಳ್ಳದ ಜನರ ಭವಿಷ್ಯ ಇಂದಿನ ಸುಪ್ರೀಂ ತೀರ್ಪಿನ ಮೇಲೆ ನಿಂತಿದೆ. ತೀರ್ಪು ಕರ್ನಾಟಕದ ಪರ ಬಂದ್ರೆ ಶಾಂತಿ ಸ್ಥಾಪನೆಯಾಗಲಿದ್ದು, ವಿರುದ್ಧ ಬಂದರೆ ಕ್ರಾಂತಿಯಾಗಲಿದೆ.
ಈಗಾಗಲೇ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಪ್ರಾಧಿಕಾರ, ಸಮಿತಿ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ರೈತರ ಹೋರಾಟಕ್ಕೆ ವಿವಿಧ ಕನ್ನಡಪರ ಸಂಘಟನೆಗಳ ಸಾಥ್ ನೀಡಿವೆ.
ಇಂದಿನ ತೀರ್ಪು ಆಧರಿಸಿ ಮುಂದಿನ ಹೋರಾಟದ ರೂಪು ರೇಷೆ ನಿರ್ಧರಿಸಲು ಅನ್ನದಾತರು ತೀರ್ಮಾನಿಸಿದ್ದಾರೆ.