ದಾವಣಗೆರೆ : ವಿಜಯನಗರದ ಪಾರ್ಕ್ ಜಾಗ ಒತ್ತುವರಿ ಮಾಡಿ ನಿರ್ಮಿಸಿಕೊಂಡಿದ್ದ 3 ಮನೆಗಳನ್ನು ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸರ ಬಂದೋಬಸ್ತ್‌ನಲ್ಲಿ ಜೆಸಿಬಿ ಮೂಲಕ ತೆರವು ಮಾಡಿದ್ದಾರೆ.
ಕಳೆದ 40 ವರ್ಷಗಳ ಹಿಂದೆ ರಾಮಪ್ಪ ಗೌಡರು ಈ ಜಾಗದಲ್ಲಿ ಮನೆಗಳನ್ನು ನಿರ್ಮಿಸಿದ್ದು, ಪಾಲಿಕೆಯಿಂದ ದಾಖಲೆಗಳನ್ನು ಪಡೆದಿದ್ದರಂತೆ. ಇದೀಗ ಅದು ಪಾರ್ಕ್ ಜಾಗ ಎಂದು ಪಾಲಿಕೆ ಅಧಿಕಾರಿಗಳು 16 ಮನೆಗಳನ್ನು ತೆರವು ಮಾಡಲು ಮುಂದಾಗಿದ್ದಾರೆ. ಮನೆಯಲ್ಲಿ ಬಾಡಿಗೆ ಇದ್ದವರ ಸಾಮಾನುಗಳನ್ನು ಮನೆಯಿಂದ ಹೊರಗೆ ಹಾಕಿಸಿ ತೆರವು ಕಾರ್ಯಾಚರಣೆ ಕೈಗೊಂಡರು. ಬಾಡಿಗೆದಾರರಿಗೆ ಯಾವುದೇ ಮಾಹಿತಿ ಇಲ್ಲದೆ ಮನೆಯಲ್ಲಿದ್ದ ಸಾಮಾನುಗಳನ್ನು ಹೊರ ಹಾಕಿ ತೆರವು ಕಾರ್ಯಾಚರಣೆ ನಡೆಸಿದ್ದಕ್ಕೆ ಬಾಡಿಗೆದಾರರು ಆಕ್ರೋಶ ವ್ಯಕ್ತ ಪಡಿಸಿದರು.
ಸದ್ಯ ಮೂರು ಮನೆಗಳ ತೆರವು ಕಾರ್ಯಾಚಣೆ ನಡೆಸಿದ್ದು ಇನ್ನುಳಿದ ಮನೆಗಳ ತೆರವು ಕಾರ್ಯಾಚರಣೆ ಬಾಕಿ ಇದೆ. ಉಳಿದ ಮನೆಗಳ ತೆರವಿಗೆ ಎರಡು ದಿನ ನೀಡಲಾಗಿದೆ. ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಮನೆಗಳನ್ನು ತೆರವುಗೊಳಿಸಿದ್ದರಿಂದ ನಮ್ಮ ಬದುಕು ಬೀದಿಗೆ ಬಂದಿದೆ ಎಂದು ಬಾಡಿಗೆದಾರರು ಆಕ್ರೋಶ ವ್ಯಕ್ತಪಡಿಸಿದರು.



