Monday, April 21, 2025
Google search engine

Homeಅಪರಾಧಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಪ್ತನಿಗೆ ಕೊಲೆ ಬೆದರಿಕೆ: ದೂರು ದಾಖಲು

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಪ್ತನಿಗೆ ಕೊಲೆ ಬೆದರಿಕೆ: ದೂರು ದಾಖಲು

ಶಿವಮೊಗ್ಗ: ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಪ್ತ ಗ್ರಾ.ಪಂ ಅಧ್ಯಕ್ಷರಾಗಿರುವ ಕೆ.ಟಿ.ರತ್ನಾಕರ್ ತಮಗೆ ಕೊಲೆ ಬೆದರಿಕೆ ಇದೆ ಎಂದು ಮೂವರ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶಶಿಕಾಂತ್ ಅತ್ತಿಕೊಡಿಗೆ, ಸ್ಕಂದ ಮತ್ತು ಶ್ರೀಕಾಂತ್ ಅತ್ತಿಕೊಡಿಗೆ ಎಂಬವರ ವಿರುದ್ಧ ತಾಲೂಕಿನ ಬಂಡಿಗಡಿ ಗ್ರಾಮದ ನಿವಾಸಿ ಕೆ.ಟಿ.ರತ್ನಾಕರ್ ದೂರು ನೀಡಿದ್ದಾರೆ.

ಶಶಿಕಾಂತ್ ಅತ್ತಿಕೊಡಿಗೆ, ಸ್ಕಂದ ಮತ್ತು ಶ್ರೀಕಾಂತ್ ಅತ್ತಿಕೊಡಿಗೆ ಎಂಬವರು ತಮ್ಮ ಮನಸ್ಸಿನಲ್ಲಿರುವ ವಿಚಾರಗಳನ್ನು ವಿನಿಮಯ ಮಾಡಿಕೊಂಡಿರುವುದರಿಂದ ತನ್ನ ಕೊಲೆ ಮಾಡಿಸುವ ಮತ್ತು ಕೊಲೆ ಪ್ರಯತ್ನದ ಉದ್ದೇಶ ಹೊಂದಿರುವುದಾಗಿ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಯಾವುದೇ ಸಮಯದಲ್ಲಿ ತನಗೆ ಹಾಗೂ ತನ್ನ ಕುಟುಂಬದರ ಜೀವಕ್ಕೆ ತೊಂದರೆ ಆಗುವ ಸಂಭವವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನಲೆಯಲ್ಲಿ ರತ್ನಾಕರ್ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆಯ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಪ್ರಕರಣ ಕುರಿತು ನ್ಯಾಯಾಲಯದ ಆದೇಶವೊಂದು ಹೊರಬಿದ್ದಿದೆ. ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಠಾಣಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ.

ಆರೋಪಿಗಳು ಫೇಸ್ ಬುಕ್ ನಲ್ಲಿ ರತ್ನಾಕರ್ ವಿರುದ್ಧ ಕೆಲ ಪೋಸ್ಟ್ ಗಳನ್ನು ಹರಿಬಿಟ್ಟಿದ್ದು ಇದು ಬೆದರಿಕೆಯಂತೆ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ರತ್ನಾಕರ್ ಕೊಲೆ ಬೆದರಿಕೆ ಪ್ರಕರಣ ದಾಖಲಿಸಿದ್ದಾರೆ.

RELATED ARTICLES
- Advertisment -
Google search engine

Most Popular