ಗುಂಡ್ಲುಪೇಟೆ: ಹಿರೀಕಾಟಿ ಗ್ರಾಮದ ಮೂಲಕ ಸಂಚರಿಸುವ ಟಿಪ್ಪರ್ ಲಾರಿಗಳಿಗೆ ಕಲ್ಲು ಹೊಡೆಯಿರಿ ಎಂದು ಗ್ರಾಮಸ್ಥರಿಗೆ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಶಾಸಕ ಎಚ್.ಎಂ.ಗಣೇಶಪ್ರಸಾದ್ ಗುಂಡಾ ವರ್ತನೆ ತೋರಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ತೀಕ್ಷ್ಣವಾಗಿ ಖಂಡಿಸಿದ್ದಾರೆ
ಎಚ್.ಎಂ.ಗಣೇಶ ಪ್ರಸಾದ್ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದೀರಾ ಇಂತಹ ಗೂಂಡಾ ಹಾಗೂ ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುವುದನ್ನು ಮೊದಲು ನಿಲ್ಲಿಸಿ. ಸಾರ್ವಜನಿಕರ ಮುಂದೆ ಮಾತನಾಡುವಾಗ ಸೌಜನ್ಯದಿಂದ ವರ್ತಿಸುವುದು ಯಾವುದೇ ಒಬ್ಬ ಜನಪ್ರತಿನಿಧಿಯ ಕರ್ತವ್ಯವಾಗಿರುತ್ತದೆ.
ಜನಗಳಿಗೆ ತಿಳುವಳಿಕೆ ಹೇಳಬೇಕು ಹೊರತು ಕಲ್ಲು ಹೊಡೆಯಿರಿ ಎಂದು ಹೇಳಬಾರದು. ಸಾರ್ವಜನಿಕರ ಮುಂದೆ ಶಾಸಕರಾಗಿ ವರ್ತಿಸಬೇಕು ಹೊರತು ಗೂಂಡಾ ಗುರುವಾಗಿ ವರ್ತಿಸಬಾರದು ಎಂದು ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ತಮ್ಮ ಪೇಸ್ ಬುಕ್ ವಾಲ್ ನಲ್ಲಿ ಬರೆದು ವಿಡಿಯೋ ಹರಿಬಿಟ್ಟಿದ್ದಾರೆ.
ಬಿಜೆಪಿ ಮುಖಂಡರಿಂದಲೂ ಖಂಡನೆ: ಮಾನ್ಯ ಗಣೇಶ್ ಪ್ರಸಾದ್ ರವರೇ ನೀವೊಬ್ಬ ಜವಾದ್ದಾರಿಯುತ ತಾಲ್ಲೂಕಿನ ಶಾಸಕರು ಎಂಬುದನ್ನ ಅರಿಯದೆ ಈ ರೀತಿಯಾಗಿ ಸಾರ್ವಜನಿಕರ ಮುಂದೆ ಕಲ್ಲು ಹೊಡೆಯಿರಿ ಎಂಬ ಪ್ರಚೋದನಕಾರಿ ಹೇಳಿಕೆಯನ್ನು ನೀಡುತ್ತಿರಲ್ಲ ಇದು ಎಷ್ಟರ ಮಟ್ಟಿಗೆ ಸರಿ?. ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದಮೇಲೆ ಎಲ್ಲವನ್ನ ತಾಳ್ಮೆಯಿಂದ ಗ್ರಹಿಸಿಕೊಳ್ಳಬೇಕು ಹಾಗು ಆ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ರೀತಿಯಲ್ಲಿ ಹೇಗೆ ಹೋರಾಟ ಮಾಡಬೇಕು ಎಂಬುದನ್ನು ಅರಿವು ಮೂಡಿಸಬೇಕು ಹೊರತು ಈ ರೀತಿಯಾಗಿ ಅನಾಗರಿಕರ ರೀತಿ ವರ್ತಿಸುವುದು ಸರಿ ಇಲ್ಲ.
ಇದು ಬಿಹಾರದ ಗುಂಡ ರಾಜಕೀಯವಲ್ಲ, ಇದು ಶಾಂತಿಯ ತವರೂರು ಕರ್ನಾಟಕ ಅದರಲ್ಲೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ. ಶಾಸಕರಾದ ಪ್ರಾರಂಭದಲ್ಲೆ ಈ ರೀತಿಯಾಗಿ ಗೂಂಡ ಸಂಸ್ಕೃತಿಗೆ ಪ್ರೇರೇಪಿಸಿದರೆ ಎಷ್ಟರಮಟ್ಟಿಗೆ ಸರಿ?
ಪೊಲೀಸರು ಯಾರ ಕಪಿಮುಷ್ಠಿಯಲ್ಲಿ ಇರುವುದಿಲ್ಲ ಇದು ನಿಮಗೆ ತಿಳಿದಿರಲಿ ಎಂದು ಹಲವು ಮಂದಿ ಬಿಜೆಪಿ ಮುಖಂಡರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡು ಶಾಸಕ ಎಚ್.ಎಂ.ಗಣೇಶಪ್ರಸಾದ್ ಹೇಳಿಕೆಯನ್ನು ಖಂಡಿಸಿದ್ದಾರೆ.