Friday, April 18, 2025
Google search engine

Homeರಾಜಕೀಯಅಕ್ರಮ ಮದ್ಯ ಮಾರಾಟ ಆರೋಪ ಸತ್ಯಕ್ಕೆ ದೂರವಾದ ಸಂಗತಿ ಸಚಿವ ಕೆ ವೆಂಕಟೇಶ್ ಗೆ ...

ಅಕ್ರಮ ಮದ್ಯ ಮಾರಾಟ ಆರೋಪ ಸತ್ಯಕ್ಕೆ ದೂರವಾದ ಸಂಗತಿ ಸಚಿವ ಕೆ ವೆಂಕಟೇಶ್ ಗೆ ಮಾಜಿ ಶಾಸಕ ಕೆ.ಮಹದೇವ್ ತಿರುಗೇಟು

ಪಿರಿಯಾಪಟ್ಟಣ: ನೆನ್ನೆ ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಕೆ.ವೆಂಕಟೇಶ್ ನನ್ನ ವಿರುದ್ಧ ಅಕ್ರಮ ಮದ್ಯ ಮಾರಾಟ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಮಾಜಿ ಶಾಸಕ ಕೆ. ಮಹದೇವ್ ತಿರುಗೇಟು ನೀಡಿದರು.

ಪಿರಿಯಾಪಟ್ಟಣದ ತಮ್ಮ ಸ್ವಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಸಂದರ್ಭ ಅಬಕಾರಿ ಇಲಾಖೆ ಅಧಿಕಾರಿಯನ್ನು ಬೆದರಿಸಿ ಗ್ರಾಮಾಂತರ ಪ್ರದೇಶಗಳಿಗೆ ನನ್ನ ಹೆಸರಿನಲ್ಲಿರುವ ಬಾರ್ ನಿಂದ ಅಕ್ರಮವಾಗಿ ಹಳ್ಳಿಗಳಿಗೆ ಮದ್ಯ ಮಾರಾಟ ಮಾಡುತ್ತಿದೆ ಎಂದು ಸಚಿವ ಕೆ.ವೆಂಕಟೇಶ್ ಹೇಳಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದ ಸಂಗತಿಯಾಗಿದೆ.

30 ವರ್ಷಗಳಿಂದ ಯಾವುದೇ ಅಕ್ರಮ ನಡೆಸದೆ ಬಾರನ್ನು ನಡೆಸಿಕೊಂಡು ಬಂದಿದ್ದು ಬಾರಿನಲ್ಲಿ ಅಕ್ರಮವಾಗಿ ಹಳ್ಳಿಗಳಿಗೆ ಮದ್ಯ ಸರಬರಾಜು ಮಾಡಿರುವ ಬಗೆ ಸಚಿವರಿಗೆ ಯಾವುದೇ ಅರ್ಜಿ ಬರದಿದ್ದರೂ ಸಹ ರಾಜಕೀಯ ದ್ವೇಷದಿಂದ ನನ್ನ ಮೇಲೆ ಸಚಿವರು ಕೆಡಿಪಿ ಸಭೆಯಲ್ಲಿ ನೇರ ಆರೋಪ ಮಾಡುತ್ತಿದ್ದು ಎಷ್ಟು ಸರಿ, ಆರು ಬಾರಿ ಶಾಸಕರಾಗಿ ಎರಡು ಬಾರಿ ಮಂತ್ರಿಯಾಗಿರುವ ಅವರ ಘನತೆ ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ಹಾಸ್ಯಸ್ಪದ ಹೇಳಿಕೆ ನೀಡುತ್ತಿದ್ದಾರೆ.

ತಾಲೂಕಿನಲ್ಲಿ ಹಿಂದಿನಿಂದಲೂ ಎಲ್.ಆನಂದ್, ಅನಂತರಾಮು, ಎಚ್.ಸಿ ಬಸವರಾಜು, ರಾಮರಾಜೆ ಅರಸ್, ಆರ್.ಎಸ್ ತಿಮ್ಮಯ್ಯರವರನ್ನು ರಾಜಕೀಯವಾಗಿ ಮೂಲೆಗುಂಪು ಅಲ್ಲದೆ ಕಾಳಮರಿಗೌಡರನ್ನು ಸಿಬಿಐ ಕೇಸಿನಲ್ಲಿ ಸಿಕ್ಕಿಸಿ ಅವರ ರಾಜಕೀಯವಾಗಿ ಅವರನ್ನು ಮುಗಿಸಿದರು .ಈಗ ನಾನೊಬ್ಬನೇ ಅವರ ಎದುರಾಳಿಯಾಗಿ ಉಳಿದಿದ್ದು ನನ್ನನ್ನು ಸಹ ರಾಜಕೀಯವಾಗಿ ಮುಗಿಸಲು ಸಂಚುರೂಪಿಸುತ್ತಿದ್ದು ನನ್ನನ್ನು ರಾಜಕೀಯವಾಗಿ ತುಳಿಯಲು ಹವಣಿಸುತ್ತಿದ್ದಾರೆ ಆದರೆ ನಾನು ಯಾವುದೇ ಬೆದರಿಕೆಗಳಿಗೆ ಜಗ್ಗುವನಲ್ಲ ರಾಜಕೀಯವಾಗಿ ಪ್ರಾಮಾಣಿಕವಾಗಿ ಜನ ಸೇವಕನಾಗಿ ಅವರ ದುರಡಳಿತವನ್ನು ಖಂಡಿಸುತ್ತೇನೆ.

ಇನ್ನು ಮುಂದಾದರೂ ಅವರ ಹೆಸರಿಗೆ ಕಳಂಕ ಬರುವ ರೀತಿಯಲ್ಲಿ ಆಡಳಿತ ನಡೆಸದೆ ಜನರು ಕೊಟ್ಟ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲಿ ಇಲ್ಲವಾದಲ್ಲಿ ಅವರ ವಿರುದ್ಧ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.
ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಅವರು ಮಾತನಾಡಿ ನನ್ನನ್ನು ಪದಚ್ಯುತಿಗೊಳಿಸಲು ಅಧಿಕಾರಕ್ಕೆ ಬಂದಾಗ ಸಚಿವ ಕೆ.ವೆಂಕಟೇಶ್ ನನ್ನ ವಿರುದ್ಧ ಪಿತೂರಿ ನಡೆಸಿ ನಾನು ಸ್ಪರ್ಧಿಸುವ ಕಗ್ಗುಂಡಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸೂಪರ್ ಸೀಡ್ ಮಾಡುವ ಉದ್ದೇಶದಿಂದ ತನಿಖೆ ನಡೆಸುತ್ತಿದ್ದಾರೆ ಯಾವುದೇ ಅಧಿಕಾರಿ ಬೆಳಗಿನ ಜಾವವೇ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ ಆದರೆ ಎಆರ್ ಓ ಮತ್ತು ಸಿಡಿಓ ಗ್ರಾಮಕ್ಕೆ ಮುಂಜಾನೆ ಭೇಟಿ ನೀಡಿರುವುದು ಖಂಡನಿಯ, ತಮ್ಮ ಮಗನನ್ನು ಎಲ್ಲ ಇಲಾಖೆಗಳ ಮೂಲಕ ಬಳಸಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದಾರೆ, ನಮ್ಮ ಚಿಂತೆ ಬಿಟ್ಟು ತಾಲೂಕಿನ ಅಭಿವೃದ್ಧಿಗೆ ಓತ್ತು ನೀಡಲಿ ಇನ್ನು ಮುಂದಿನ ದಿನಗಳಲ್ಲಿ ಸುಳ್ಳು ಆರೋಪ ಮಾಡಿದರೆ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಐಲಾಪುರರಾಮು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular