ಮೈಸೂರು :- ದೇಶ ಸೇವೆಗಾಗಿ ಹೆಂಡತಿ ಮಕ್ಕಳನ್ನು ಬಿಟ್ಟುಗಡಿಯಲ್ಲಿ ಸಾವನ್ನೂ ಲೆಕ್ಕಿಸದೇ ವೈರಿಗಳೊಡನೆ ಹೋರಾಡಿ ತ್ಯಾಗಮಯಿಗಳಾಗಿದ್ದ ಮಾಜಿ ಸೈನಿಕರು ಸ್ವಾಭಿಮಾನಿಗಳಾಗಿ ಬದುಕಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡಕರೆ ನೀಡಿದರು.
ವಿವೇಕಾನಂದ ನಗರದಲ್ಲಿರುವ ನಾಗಮ್ಮಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕದ ಮಾಜಿ ಸೈನಿಕರ ಸಂಘದ ಮೈಸೂರು ಜಿಲ್ಲಾ ಘಟಕದ ವತಿಯಿಂದ ನಡೆದ ೨೦೨೨-೨೩ನೇ ಸಾಲಿನ ೨ನೇ ವಾರ್ಷಿಕ ಸರ್ವ ಸದಸ್ಯರ ಮಹಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಮಾಜಿ ಸೈನಿಕರಿಗೆ ಎಲ್ಲವನ್ನುಕೊಡುತ್ತಿದೆ, ಆದರೆ ಅದನ್ನು ಬಳಸಿಕೊಳ್ಳಲು ನಾವೇಲ್ಲರೂ ಒಗ್ಗಟ್ಟಾಗಿರಬೇಕು. ನಾನು ಮಾಜಿ ಸೈನಿಕನೆಂಬ ಕಾರಣಕ್ಕೆ ನನಗೆ ಎಂ.ಎಲ್.ಸಿ. ಟಿಕೆಟ್ ನೀಡಿದರು, ನಿಮ್ಮೆಲ್ಲರ ಆಶೀರ್ವಾದದಿಂದ ಗೆದ್ದು ಬಂದೆ. ನಾನೊಬ್ಬ ಮಾಜಿ ಸೈನಿಕನೆಂದು ಹೇಳಲು ನನಗೆ ಹೆಮ್ಮೆಇದೆ.ನಾನು ನಿಮ್ಮಿಂದ ಎನನ್ನೂ ಬಯಸುವುದಿಲ್ಲ, ವಿಧಾನ ಪರಿಷತ್‌ನಲ್ಲಿ ಮಾಜಿ ಸೈನಿಕರ ಸಮಸ್ಯೆಯ ಬಗ್ಗೆ ಮಾತನಾಡುತ್ತೇನೆ.
ಮಾಜಿ ಸೈನಿಕರ ಸಂಘದ ಅಭಿವೃದ್ಧಿಗೆ ನಾನು ದುಡಿಯಲು ಸಿದ್ದನಿದ್ದು ಸಂಘಕ್ಕೆ ಸಂಪನ್ಮೂಲ ಕ್ರೋಢೀಕರಿಸಲು ಸಹಾಯ ಮಾಡುತ್ತೆನೆ.ಈ ಸಂಘಕ್ಕೆ ಸಿ.ಎ. ನಿವೇಶನ ಕೊಡಿಸುವುದರ ಜೊತೆಗೆ ಅದರ ಹಣವನ್ನು ನಾನೇ ಭರಿಸುತ್ತೇನೆ. ಹಾಗೂ ಕಟ್ಟಡ ನಿರ್ಮಾಣಕ್ಕೂ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ೫ ಲಕ್ಷರೂ ಗಳನ್ನು ನೀಡುತ್ತೇನೆ. ನೀವೂ ಸಹ ತಮ್ಮಿಂದಾಗುವ ಸಹಾಯವನ್ನು ಸಂಘಕ್ಕೆ ಮಾಡಬೇಕು. ಮಾಜಿ ಸೈನಿಕರ ಮಕ್ಕಳಿಗೆ ಪ್ರೋತ್ಸಾಹ, ವಿದೇಶದಲ್ಲಿಓದುವ ಮಕ್ಕಳಿಗೆ ಹಾಗು ಕ್ರೀಡಾಪಟುಗಳಿಗೂ ಸಂಘದಿoದ ಸಹಾಯ ಮಾಡಲು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಪಡೆದ ಮಾಜಿ ಸೈನಿಕರ ಮಕ್ಕಳನ್ನು ಅಭಿನಂದಿಸಲಾಯಿತು. ಸಮಾರoಭದಲ್ಲಿ ಸಂಘದಅಧ್ಯಕ್ಷರಾದ ಕೆ.ಪಿ. ದಿವಾಕರ್, ಉಪಾಧ್ಯಕ್ಷರಾದ ಎಂ.ಕೆ. ಅಣ್ಣೇಗೌಡ,ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ನಂಜುoಡಸ್ವಾಮಿ, ಖಜಾಂಚಿಎಸ್. ನಟರಾಜ್, ವೀರನಾರಿಯರಘಟಕದರಾಜ್ಯಾದ್ಯಕ್ಷೆರಜನಿ ಸುಬ್ಬಯ್ಯ, ದಿನೇಶ್‌ಗೌಡ, ಉಪಸ್ಥಿತರಿದ್ದರು.