ರಾಯಚೂರು: ಜಿಲ್ಲೆಯ ಲಿಂಗಸೂಗೂರ ತಾಲೂಕಿನ ಮಾಚ ನೂರು ಗ್ರಾಮದ ಆಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ಲಿಂಗಸೂಗೂರ ಅಬಕಾರಿ ಅಧಿಕಾರಿ ದಾಳಿ ಮಾಡಿ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ. ಮಾಚನೂರು ಗ್ರಾಮದ ಆರೋಪಿತರಾದ ಶ್ರೀದೇವಿ ಗಂಡ ರಮೇಶ ಮತ್ತು ದೇವಮ್ಮ ಗಂಡ ದೇವೆಂದ್ರಪ್ಪ ಎಂಬುವವರ ಮನೆ ಅಬಕಾರಿ ದಾಳಿ ಮಾಡಿದಾಗ ಶ್ರೀದೇವಿ ಗಂಡ ರಮೇಶ ಮನೆಯಲ್ಲಿ ಅಕ್ರಮವಾಗಿ ಒಟ್ಟು 14.04 ಲೀಟರ್ ಮದ್ಯ ಹಾಗೂ 7.26 ಲೀಟರ್ ಬಿಯರ್ ಸಂಗ್ರಹಿಸಿಟ್ಟಿರುವುದನ್ನು ಪತ್ತೆಹಚ್ಚಿ ಮತ್ತು ದೇವಮ್ಮ ಗಂಡ ದೇವೆಂದ್ರಪ್ಪ ಈಕೆಯ ಮನೆಯಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಒಟ್ಟು 25.920 ಲೀಟರ್ ಮದ್ಯವನ್ನು ಸಂಗ್ರಹಿಸಿಟ್ಟಿರುವುದನ್ನು ಪತ್ತೆಹಚ್ಚಿ ಪ್ರಕರಣವನ್ನು ದಾಖಲಿಸಿ ಪ್ರಥಮ ವರ್ತಮಾನ ವರದಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ . ಸದರಿ ಪ್ರಕರಣದಲ್ಲಿ 18,876 ರೂ ಮೊತ್ತದ ಮದ್ಯ ವಶಪಡಿಸಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಅಬಕಾರಿ ಉಪ ನಿರೀಕ್ಷರಾದ ಲಿಂಗರಾಜ ಮಹ್ಮದ್ ಹುಸೇನ್ ಉಪಸ್ಥಿತರಿದ್ದರು.