Tuesday, January 27, 2026
Google search engine

Homeರಾಜಕೀಯಅಬಕಾರಿ ಅಕ್ರಮ: ನೈತಿಕ ಹೊಣೆ ಹೊತ್ತು ಸಚಿವ ತಿಮ್ಮಾಪುರ್ ರಾಜೀನಾಮೆ ಬೇಡಿಕೆ

ಅಬಕಾರಿ ಅಕ್ರಮ: ನೈತಿಕ ಹೊಣೆ ಹೊತ್ತು ಸಚಿವ ತಿಮ್ಮಾಪುರ್ ರಾಜೀನಾಮೆ ಬೇಡಿಕೆ

ಬೆಂಗಳೂರು :‌ ಅಬಕಾರಿ ಇಲಾಖೆಯಲ್ಲಿನ ಅಕ್ರಮದ ನೈತಿಕ ಹೊಣೆ ಹೊತ್ತು ಸಚಿವ ತಿಮ್ಮಾಪುರ್ ರಾಜೀನಾಮೆ ಕೊಡಬೇಕು. ಹಾಲಿ ನ್ಯಾಯಾಧೀಶ ನೇತೃತ್ವದಲ್ಲಿ ಅಬಕಾರಿ ‌ಇಲಾಖೆ ಭ್ರಷ್ಟಾಚಾರದ ಬಗ್ಗೆ ತನಿಖೆ ಆಗಬೇಕು ಅಂತ ಬಿಜೆಪಿ ಆಗ್ರಹಿಸಿದೆ.

ವಿಧಾನ ಪರಿಷತ್ ‌ಕಲಾಪದಲ್ಲಿ ನಿಯಮ 330ರ ಅಡಿ ಬಿಜೆಪಿ ವಿಷಯ ‌ಪ್ರಸ್ತಾಪ ಮಾಡಿತು. ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತಾಡಿ, ಅಬಕಾರಿ ಇಲಾಖೆಯಲ್ಲಿ ಅಕ್ರಮ ನಡೆಯುತ್ತಿದೆ. ಕೋಟಿ ಕೋಟಿಗಳಲ್ಲಿ ಅಕ್ರಮ ನಡೆಯುತ್ತಿದೆ. ಎಲ್ಲಾ ‌ಮಾಧ್ಯಮಗಳಲ್ಲಿ ಚರ್ಚೆ ಆಗ್ತಿದೆ. ಆಸೋಸಿಯೇಷನ್ ಅವರು ಹಣ ಕೊಟ್ಟು ಕೊಟ್ಟು ಕುಪಿತರಾಗಿ ಬೀದಿ ಬೀದಿಗಳಲ್ಲಿ ಮಾತಾಡ್ತಿದ್ದಾರೆ‌. ಅಧಿಕಾರಿಗಳು ಹಣ ಸಂಗ್ರಹ ಮಾಡೋವಾಗ ಲೋಕಾಯುಕ್ತ ರೇಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಒಂದೂವರೆ ಕೋಟಿಗೆ ಲೈಸೆನ್ಸ್ ಕೊಡೋಕೆ ‌ಲಂಚ ಕೊಡೋವಾಗ ಸಿಕ್ಕಿಬಿದ್ರು. 3 ಅಧಿಕಾರಿಗಳು ಸಿಕ್ಕಿ ಬಿದ್ದರು. ಸರ್ಕಾರದ ಭ್ರಷ್ಟಾಚಾರಕ್ಕೆ ಇದು ಸಾಕ್ಷಿ ಅಂತ ಕಿಡಿಕಾರಿದರು.

ಈಗಾಗಲೇ ಅಕ್ರಮದ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ಸಚಿವರು ನನ್ನ ಮಗನನ್ನ ದುರುಪಯೋಗ ‌ಮಾಡಿಕೊಂಡಿದ್ದಾರೆ ಅಂತ ಹೇಳ್ತಾರೆ. ಹಾಗಾದ್ರೆ ಮಂತ್ರಿಗಳು ಮಗನ ಕೈಗೆ ಹಣ ‌ಕೊಡಿ ಅಂತ ಹೇಳಿದ್ರಾ? ಲಕ್ಷ್ಮೀನಾರಾಯಣ ಅನ್ನೋರು ಲೋಕಾಯುಕ್ತಗೆ‌ ದೂರು ಕೊಟ್ಟರು. ಗುರುಸ್ವಾಮಿ ಅನ್ನೋ‌‌ ಅಸೋಸಿಯೇಷನ್ ‌ಅಧ್ಯಕ್ಷ ಮೇಲಿಂದ ಕೆಳಗಿನವೆರೆಗೂ ಲಂಚ ಕೊಡಬೇಕು ಅಂತ ಮಾತಾಡಿದ್ದಾರೆ. ಅಬಕಾರಿ ಡಿಸಿ, ಎಸ್ಪಿ ಬಲೆಗೆ ಬಿದ್ದಿದ್ದಾರೆ. ಲಿಕ್ಕರ್ ಲೈಸೆನ್ಸ್ ಕೊಡ್ತಿಲ್ಲ ಅಂತ ಸರ್ಕಾರ ಹೇಳಿದ್ರು 2 ಸಾವಿರ ಲೈಸೆನ್ಸ್ ಅಕ್ರಮವಾಗಿ ಕೊಡಲಾಗಿದೆ. 50 ಲಕ್ಷದಿಂದ 1 ಕೋಟಿವರೆಗೂ ಲಂಚ ಕೊಡಬೇಕು ಅಂತ ಅಧ್ಯಕ್ಷರು ಹೇಳಿದ್ದಾರೆ. ತಿಂಗಳ 10ನೇ ತಾರೀಖು ಹಣ ಕೊಡದೇ ಹೋದರೆ ಕಿರುಕುಳ ಶುರು ‌ಮಾಡ್ತಾರೆ ಅಂತ ಆರೋಪಿಸಿದರು.

ಸಚಿವರು, ನನ್ ಇಲಾಖೆಯಲ್ಲಿ ಮಾತ್ರ ಅಲ್ಲ. ಎಲ್ಲಾ ‌ಇಲಾಖೆಯಲ್ಲಿ ನಡೆಯುತ್ತಿದೆ ಅವರನ್ನು ಕೇಳಿ ಅಂದರು. ಅವರಿಗೆ ಪದ್ಮ ಭೂಷಣ ಕೊಡಬೇಕು. ಭ್ರಷ್ಟಾಚಾರ ಮಾಡೋಕೆ ಮಂತ್ರಿ ಮಂಡಲ ಇದ್ದರೆ ನಾವು ವಿಪಕ್ಷ ನೋಡಿಕೊಂಡು ಇರಬೇಕಾ? ಭ್ರಷ್ಟಾಚಾರ ಮಾಡೋರಿಗೆ ಶಿಕ್ಷೆ ಆಗಬೇಕು. ರೆಡ್‌ಹ್ಯಾಂಡ್ ಆಗಿ ತಿಮ್ಮಾಪುರ್ ಸಿಕ್ಕಿ ಹಾಕಿಕೊಂಡಿದ್ದಾರೆ. ಪುರಾವೆ ಎಲ್ಲವೂ ಹೇಳ್ತಿದೆ. 4 ಸಾವಿರ ಕೋಟಿ ಅಕ್ರಮ ಇದೆ. ಗುರುಸ್ವಾಮಿ 6 ಕೋಟಿ ಅಂತ ಹೇಳಿದ್ದಾರೆ. ಸಿಎಂ ಅವರು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅಂದರೆ ಇದರಲ್ಲಿ ಸಿಎಂ ಇದ್ದಾರೆ ಅಂತ ಆಗುತ್ತೆ ಅಂತ ಆರೋಪ ಮಾಡಿದ್ರು.

ರವಿಕುಮಾರ್ ಮಾತಾಡಿ, ಮಂತ್ರಿಗಳ ಅಶ್ರಯ ಇಲ್ಲದೆ ಇದು ನಡೆಯೋಕೆ ಸಾಧ್ಯನಾ? ಮಂತ್ರಿಯ ಬೆಂಬಲ, ಸರ್ಕಾರದ ಬೆಂಬಲ ಇಲ್ಲದೆ ಇಷ್ಟು ಅಕ್ರಮ ಆಗೊಲ್ಲ. ಆಡಿಯೋ ರೆಕಾರ್ಡಿಂಗ್ ಇದೆ. ಮಾಧ್ಯಮಗಳಲ್ಲಿ ಬಂದಿದೆ. ಹಿಂದೆ ಈಶ್ವರಪ್ಪ ಮೇಲೆ ‌ಆರೋಪ ಬಂದಾಗ ರಾಜೀನಾಮೆ ‌ಕೊಟ್ಟರು. ಸಿದ್ದರಾಮಯ್ಯ ಅವರು ಅವತ್ತು ಮೊದಲು ರಾಜೀನಾಮೆ ಕೊಡಿ ಅಂದರು. ಈಗ ನೈತಿಕ ಹೊಣೆ ಹೊತ್ತು ತಿಮ್ಮಾಪುರ್ ಹತ್ರ ರಾಜೀನಾಮೆ ಕೊಡಿ. ತನಿಖೆ ಆಗಲಿ ಎಂದರು.

ಅಧಿಕಾರಿಗಳು ವರ್ಗಾವಣೆ ಆಗಲು ಲಂಚ ಕೊಡಬೇಕು. ಓಪನ್ ಆಗಿಯೇ ಭ್ರಷ್ಟಾಚಾರ ನಡೆಯುತ್ತಿದೆ. ಈ ಮಂತ್ರಿ ಬದಲಾವಣೆ ಮಾಡಿ ಅಂತ ಅಸೋಸಿಯೇಷನ್ ಅವರು ಸಿಎಂಗೆ ಮನವಿ ಮಾಡಿದ್ದಾರೆ. ಅಬಕಾರಿ ಅಕ್ರಮದ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು. ನೈತಿಕ ಹೊಣೆ ಹೊತ್ತು ತಿಮ್ಮಾಪುರ್ ರಾಜೀನಾಮೆ ಕೊಡಬೇಕು. ಸಿಎಂ ಅವರು ಇದಕ್ಕೆ ಉತ್ತರ ಕೊಡಬೇಕು. ಸಚಿವರು ರಾಜೀನಾಮೆ ಕೊಡೋವರೆಗೂ ನಾವು ಹೋರಾಟ ಬಿಡೊಲ್ಲ ಅಂತ ಎಚ್ಚರಿಕೆ ಕೊಟ್ಟರು.

RELATED ARTICLES
- Advertisment -
Google search engine

Most Popular