Friday, April 11, 2025
Google search engine

Homeರಾಜ್ಯಸುದ್ದಿಜಾಲದುಬಾರಿ ಬೆಲೆಗೆ ಮದ್ಯ ಮಾರಾಟ ಅಬಕಾರಿ ಅಧಿಕಾರಿಗಳಿಂದ ಪರಿಶೀಲನೆ

ದುಬಾರಿ ಬೆಲೆಗೆ ಮದ್ಯ ಮಾರಾಟ ಅಬಕಾರಿ ಅಧಿಕಾರಿಗಳಿಂದ ಪರಿಶೀಲನೆ


ಯಳಂದೂರು: ಪಟ್ಟಣದ ಶ್ರೀರಂಗ ವೈನ್ಸ್‌ನಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಕೆಲ ನಾಗರೀಕರು ಫೆ.೦೪ ರಂದು ವೈನ್ ಶಾಪ್ ಮುಂದೆ ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಅಬಕಾರ ನಿರೀಕ್ಷಕ ಮಹದೇವ್ ನೇತೃತ್ವದ ಇಲಾಖೆಯ ತಂಡ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ಮದ್ಯದ ಬಾಟಲಿ ಹಾಗೂ ಇದಕ್ಕೆ ಸಂಬಂಧಿಸಿದ ಮಾರಾಟ ಪುಸ್ತಕ, ದಾಸ್ತಾನು ಪುಸ್ತಕ ಸೇರಿದಂತೆ ಇತರೆ ಕಡತಗಳನ್ನು ಪರಿಶೀಲಿಸಿದರು.

ಮಹದೇವ್ ಮಾತನಾಡಿ, ಎಂಆರ್‌ಪಿ ದರಕ್ಕಿಂದ ಹೆಚ್ಚಿನ ಬೆಲೆಗೆ ಮದ್ಯ ಮಾರಾಟವಾಗಿದೆ ಎಂದು ದಿನಪತ್ರಿಕೆಗಳಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ನಾನು ಇಲ್ಲಿಗೆ ಭೇಟಿ ನೀಡಿದ್ದೇನೆ. ಮದ್ಯದ ದರ ಏಕಾಏಕಿ ಏರಿದ ಹಿನ್ನೆಲೆಯಲ್ಲಿ ಇಲ್ಲಿರುವ ಸ್ಟಾಕ್‌ನಲ್ಲಿ ಹಳೆ ಎಂಆರ್‌ಪಿ ದರವಿರುವ ಸರಕನ್ನು ಅಂಗಡಿಯವರು ಖರೀದಿ ಮಾಡಿದ್ದಾರೆ. ಆದರೆ ಹೊಸ ಬೆಲೆಗೆ ಇದನ್ನು ಪಡೆದಿದ್ದಾರೆ. ಹಾಗಾಗಿ ಹೊಸ ಬೆಲೆಗೆ ಇದನ್ನು ಮಾರಾಟ ಮಾಡಿದ್ದಾರೆ. ಇಲ್ಲಿರುವ ಖರೀದಿ ಬಿಲ್, ಸ್ಟಾಕ್‌ಬುಕ್‌ನ್ನು ಪರಿಶೀಲಿಸಿದಾಗ ಇದು ಸರಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ದರದ ಮಾಹಿತಿ ನೀಡಬೇಕೆಂದು ನಾನು ಈಗಾಗಲೇ ಅಂಗಡಿಯವರಿಗೆ ಮಾಹಿತಿ ನೀಡಿದ್ದೇನೆ. ಈ ಬಗ್ಗೆ ಸಾರ್ವಜನಿಕರು ಏನಾದರು ದೂರುಗಳು ಇದ್ದಲ್ಲಿ ನಮ್ಮ ಇಲಾಖೆಗೆ ಲಿಖಿತವಾಗಿ ದೂರು ನೀಡಿದರೆ ಅವರ ವಿರುದ್ಧ ಶಿಸ್ತು ಕ್ರಮಜರುಗಿಸಲಾಗುವುದು ಎಂದು ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular