Sunday, April 20, 2025
Google search engine

Homeಅಪರಾಧಅಬಕಾರಿ ನೀತಿ ಹಗರಣ: ೭ನೇ ಬಾರಿಗೆ ಸಮನ್ಸ್ ವಿಚಾರಣೆಯಿಂದ ತಪ್ಪಿಸಿಕೊಂಡ ಕೇಜ್ರಿವಾಲ್

ಅಬಕಾರಿ ನೀತಿ ಹಗರಣ: ೭ನೇ ಬಾರಿಗೆ ಸಮನ್ಸ್ ವಿಚಾರಣೆಯಿಂದ ತಪ್ಪಿಸಿಕೊಂಡ ಕೇಜ್ರಿವಾಲ್

ನವದೆಹಲಿ: ಮದ್ಯ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಇಡಿ ಮುಂದೆ ಹಾಜರಾಗಬೇಕಿದೆ. ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಡಿ ಅರವಿಂದ್ ಕೇಜ್ರಿವಾಲ್ ಅವರಿಗೆ ೭ನೇ ಬಾರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಸದ್ಯಕ್ಕೆ ಅವರು ಹಾಜರಾಗುವುದಿಲ್ಲ ಎಂದು ಆಪ್ ಸ್ಪಷ್ಟನೆ ನೀಡಿದೆ.

ಪ್ರಕರಣ ದೆಹಲಿ ಹೈಕೋರ್ಟ್‌ನಲ್ಲಿದೆ. ಮಾರ್ಚ್ ೧೬ಕ್ಕೆ ವಿಚಾರಣೆ ಕೂಡ ನಿಗದಿಪಡಿಸಲಾಗಿದೆ. ತೀರ್ಪು ಬಂದ ಬಳಿಕವೇ ನಿರ್ಧರಿಲಾಗುವುದು. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗುವುದಿಲ್ಲ. ಸಂಸ್ಥೆಯು ಪದೇ ಪದೆ ಸಮನ್ಸ್ ನೀಡುವ ಬದಲು ನ್ಯಾಯಾಲಯದ ಆದೇಶಕ್ಕಾಗಿ ಕಾಯಬೇಕು ಯಾವುದೇ ಕಾರಣಕ್ಕೂ ಆಪ್ ಮೈತ್ರಿಯಿಂದ ಹೊರಗೆ ಬರದು. ಅಲ್ಲದೇ ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನ ಕೂಡ ನಡೆಯುತ್ತಿದೆ. ಜೊತೆಗೆ ಅಬಕಾರಿ ನೀತಿ ಹಗರಣ ಹೈಕೋರ್ಟ್ ಮುಂದೆ ಇದೆ. ಎಲ್ಲವೂ ಗೊತ್ತಿದ್ದೂ ಕೇಂದ್ರ ಸರ್ಕಾರ ಈ ರೀತಿ ಒತ್ತಡ ಹೇರಬಾರದು. ಅಂತಹ ಪರಿಸ್ಥಿತಿಯಲ್ಲಿ ಇಡಿ ಕಳುಹಿಸಿರುವ ಸಮನ್ಸ್‌ಗೆ ಯಾವುದೇ ಅರ್ಥವಿಲ್ಲ. ಹೀಗಾಗಿ ಇಡಿ ಕಳುಹಿಸಿರುವ ಸಮನ್ಸ್‌ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಜರಾಗುವ ಬಗ್ಗೆ ಇಂದಿಗೂ ಅನುಮಾನವಿದೆ” ಎಂದು ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಇನ್ನು ಮೇಲಿಂದ ಮೇಲೆ ಸಮನ್ಸ್ ಕಳುಹಿಸುತ್ತಿರುವ ಇಡಿಗೆ ಪತ್ರ ಬರೆದಿರುವ ಎಎಪಿ ರಾಷ್ಟ್ರೀಯ ಸಂಚಾಲಕರು, ಕಳುಹಿಸಿರುವ ಸಮನ್ಸ್‌ಗಳನ್ನು ಹಿಂಪಡೆಯುವಂತೆ ಕೋರಿದ್ದಾರೆ.

RELATED ARTICLES
- Advertisment -
Google search engine

Most Popular