ರಾಯಚೂರು: ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆದಿರುವ ಗಾಂಜಾ ಚಾಕೊಲೇಟ್ ದಂಧೆ ಕಡಿವಾಣಕ್ಕೆ ಅಬಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ನಿರಂತರ ದಾಳಿ ನಡೆಸಿದ್ದಾರೆ.
ನಗರದ ಹೊರವಲಯದ ಯರಮರಸ್ ಬಳಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಶಡ್ ಒಂದರಲ್ಲಿ ಸಂಗ್ರಹಿಸಿಟ್ಟಿದ್ದ 200 ಗಾಂಜಾ ಚಾಕೊಲೇಟ್‌ಗಳನ್ನ ಜಪ್ತಿ ಮಾಡಿದ್ದು, ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.

ಬಿಹಾರ ಮೂಲದ ಆರೋಪಿಗಳು ಜಿಲ್ಲೆಯ ಹಲವೆಡೆ ಗಾಂಜಾ ಚಾಕೊಲೇಟ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ರಾಜಾರಾವ್ ಮಂಡಲ, ರಂಜಿತ ಕುಮಾರ್ ಬಂಧಿತ ಆರೋಪಿಗಳು.
ಬಿಹಾರ ಹಾಗೂ ಉತ್ತರ ಪ್ರದೇಶದಿಂದ ಅಕ್ರಮವಾಗಿ ಗಾಂಜಾ ಚಾಕೊಲೇಟ್ ತಂದು ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಅಧಿಕಾರಿಗಳ ವಿಚಾರಣೆಯಲ್ಲಿ ತಿಳಿದುಬಂದಿದೆ. ದಾಳಿ ಹಿನ್ನೆಲೆ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.