Friday, April 11, 2025
Google search engine

Homeಸ್ಥಳೀಯಜ.10 ರಿಂದ ಅಯೋಧ್ಯೆ ಶ್ರೀ ರಾಮಲಲ್ಲಾ ಮೂರ್ತಿಗೆ ನಿರ್ಮಿಸಿದ್ದ ಪೀಠ ಮತ್ತು ಉಳಿ, ಸುತ್ತಿಗೆಗಳ ಪ್ರದರ್ಶನ

ಜ.10 ರಿಂದ ಅಯೋಧ್ಯೆ ಶ್ರೀ ರಾಮಲಲ್ಲಾ ಮೂರ್ತಿಗೆ ನಿರ್ಮಿಸಿದ್ದ ಪೀಠ ಮತ್ತು ಉಳಿ, ಸುತ್ತಿಗೆಗಳ ಪ್ರದರ್ಶನ

ಮೈಸೂರು: ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿಗೆ ನಿರ್ಮಿಸಿದ್ದಂತಹ ಪೀಠ ಹಾಗೂ ಶ್ರೀ ರಾಮಲಲ್ಲಾರ ಮೂರ್ತಿಯ ಕೆತ್ತನೆಗೆ ಬಳಸಿದ್ದ ಉಳಿ ಸುತ್ತಿಗೆಗಳನ್ನ ಜನವರಿ 10 ರಿಂದ ಜ.12ರವರೆಗೆ ಪ್ರದರ್ಶನಕ್ಕೆ ಇಡುವುದಾಗಿ ಶಿಲ್ಪ ಕಲಾವಿದ ಡಾ. ಅರುಣ್ ಯೋಗಿರಾಜ್ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಶಿಲ್ಪಿ ಅರುಣ್ ಯೋಗಿರಾಜ್, ಇದೇ ಜನವರಿ 10ನೇ ತಾರೀಖಿನಿಂದ 12ನೇ ತಾರೀಖಿನವರೆಗೆ ನಮ್ಮದೇ ಬ್ರಹ್ಮರ್ಷಿ ಕಶ್ಯಪ ಶಿಲ್ಪ ಕಲಾಶಾಲ (ರಿ) ಸಾಹುಕಾರ್ ಚೆನ್ನಯ್ಯ ರಸ್ತೆ ಗಂಗೋತ್ರಿ ಬಡಾವಣೆ (ವಾಣಿವಿಲಾಸ ವಾಟ‌‌ರ್ ಟ್ಯಾಂಕ್ ಹತ್ತಿರ) ಇಲ್ಲಿ ಭಾರತೀಯ ಶಿಲ್ಪಶಾಸ್ತ್ರ ಪ್ರಕಾರದ ಕೃಷ್ಣಶಿಲೆಯಲ್ಲಿ ನಿರ್ಮಿಸಿರುವ ಶ್ರೀ ವಿಷ್ಣುವಿನ ಮೂರ್ತಿಯನ್ನು ಪೂರ್ವಪ್ರತಿಷ್ಠಾಪನಾ ಪ್ರದರ್ಶನ ಜೊತೆಗೆ ಅಯೋಧ್ಯೆ ಶ್ರೀ ರಾಮಲಲ್ಲಾ ಮೂರ್ತಿಗೆ ನಿರ್ಮಿಸಿದ್ದಂತಹ ಪೀಠ ಹಾಗೂ ಶ್ರೀ ರಾಮಲಲ್ಲಾರ ಮೂರ್ತಿಯ ನೇತ್ರೋನ್ಮಿಲನಕ್ಕೆ ಬಳಸಿದಂತಹ ಉಳಿ, ಸುತ್ತಿಗೆಗಳು ಮತ್ತು ಅನಂದ ತಾಂಡವ ಶಿವಮೂರ್ತಿಯ ಶಿಲ್ಪಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಜನವರಿ 10ರ ಬೆಳಗ್ಗೆ 10 ಗಂಟೆಗೆ ಪ್ರದರ್ಶನ ಉದ್ಘಾಟನೆಯಾಗಲಿದ್ದು ಜನವರಿ 12ರವರೆಗೆ ಪ್ರತಿ ದಿನ ಬೆಳಗ್ಗೆ 10 ರಿಂದ ಸಂಜೆ 7.30 ರವರೆಗೆ ಪ್ರದರ್ಶನವಿರಲಿದೆ ಎಂದು ಅರುಣ್ ಯೋಗಿರಾಜ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular