Sunday, April 20, 2025
Google search engine

Homeರಾಜ್ಯಮನೆಯಲ್ಲಿ ಸ್ಫೋಟ: ವಿಕಲಚೇತನ ವಯೋವೃದ್ಧೆ ಸ್ಥಿತಿ ಗಂಭೀರ

ಮನೆಯಲ್ಲಿ ಸ್ಫೋಟ: ವಿಕಲಚೇತನ ವಯೋವೃದ್ಧೆ ಸ್ಥಿತಿ ಗಂಭೀರ

ದಾವಣಗೆರೆ: ಮನೆಯಲ್ಲಿ ಸ್ಫೋಟದ ಪರಿಣಾಮ ವಿಕಲ ಚೇತನ ವಯೋವೃದ್ಧೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ವಿನೋಬ ನಗರದ ಒಂದನೇ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಸ್ಮಿತಾ ಎಂಬ ವಯೋವೃದ್ದೆ ಗಂಭೀರವಾಗಿ ಗಾಯಗೊಂಡವರು.

ವಿನೋಬ ನಗರದ ಒಂದನೇ ಮುಖ್ಯ ರಸ್ತೆಯ 17 ನೇ ಕ್ರಾಸ್ ನ ಮಾಚಿದೇವ ಸಮುದಾಯ ಭವನ ಸಮೀಪ ಸ್ಮಿತಾ ತಮ್ಮ ಮಗನ ಜೊತೆ ವಾಸವಿದ್ದರು. ಮಧ್ಯಾಹ್ನದ ವೇಳೆ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸ್ಫೋಟದಿಂದ ಸ್ಮಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಕ್ಕಪಕ್ಕದ ಮನೆಯವರು ಸ್ಮಿತಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರಂತ ಸಂಭವಿಸಿದ ಸಂದರ್ಭದಲ್ಲಿ ಮಗ ಮನೆಯಲ್ಲಿ ಇರಲಿಲ್ಲ.

ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕುಕ್ಕರ್ ಸ್ಫೋಟಗೊಂಡಿರಬಹುದು ಎನ್ನಲಾಗುತ್ತಿದೆ. ಒತ್ತಡದಿಂದ ಸಿಲಿಂಡರ್ ಸ್ಫೋಟ ಆಗಿರಬಹುದು ಎನ್ನಲಾಗುತ್ತಿದೆ.

 ತನಿಖೆ ನಂತರವೇ ನಿಖರ ಕಾರಣ ಗೊತ್ತಾಗಲಿದೆ.

RELATED ARTICLES
- Advertisment -
Google search engine

Most Popular