Monday, December 2, 2024
Google search engine

HomeUncategorizedರಾಷ್ಟ್ರೀಯದೆಹಲಿಯ ಪಿವಿಆರ್‌ ಸಿನಿಮಾ ಹಾಲ್‌ ಬಳಿ ಸ್ಫೋಟ

ದೆಹಲಿಯ ಪಿವಿಆರ್‌ ಸಿನಿಮಾ ಹಾಲ್‌ ಬಳಿ ಸ್ಫೋಟ

ನವದೆಹಲಿ: ವಾಯುವ್ಯ ದೆಹಲಿಯ ಪ್ರಶಾಂತ್‌ ವಿಹಾರ್‌ ಪ್ರದೇಶದ ಪಿವಿಆರ್‌ ಸಿನಿಮಾ ಹಾಲ್‌ ಬಳಿ ಸ್ಫೋಟ ಸಂಭವಿಸಿದೆ.

ಇಂದು ಬೆಳಗ್ಗೆ 11:48ರ ಸುಮಾರಿಗೆ ಸ್ಫೋಟದ ಸದ್ದು ಕೇಳಿಸಿದೆ. ಪೊಲೀಸರು ಮತ್ತು ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ದೆಹಲಿ ಪೊಲೀಸ್ ವಿಶೇಷ ದಳದ ತಂಡವು ತೆರಳಿದೆ.

ಪ್ರಶಾಂತ್ ವಿಹಾರ್‌ನ ಸಿಆರ್‌ಪಿಎಫ್ ಶಾಲೆಯ ಬಳಿ ಸ್ಫೋಟ ಸಂಭವಿಸಿದ ಒಂದು ತಿಂಗಳ ನಂತರ ಮತ್ತೊಂದು ಘಟನೆ ನಡೆದಿದೆ. ಸ್ಫೋಟದಲ್ಲಿ ಶಾಲೆಯ ಗೋಡೆಗೆ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಉದ್ಯಾನದ ಗಡಿ ಗೋಡೆಯ ಬಳಿ ಸ್ಫೋಟ ಸಂಭವಿಸಿದೆ. ತನಿಖಾಧಿಕಾರಿಗಳು ಸ್ಥಳದಲ್ಲಿ ಬಿಳಿ ಪುಡಿಯಂತಹ ವಸ್ತುವನ್ನು ಗಮನಿಸಿದ್ದಾರೆ. ಶಾಲೆಯ ಸ್ಫೋಟದ ಸ್ಥಳದಲ್ಲಿ ಇದೇ ರೀತಿಯ ಪುಡಿ ಪದಾರ್ಥ ಪತ್ತೆಯಾಗಿತ್ತು.

RELATED ARTICLES
- Advertisment -
Google search engine

Most Popular