ಮಂಡ್ಯ :ಎಕ್ಸ್‌ಪ್ರೆಸ್ ಹೈವೇ ನಲ್ಲಿ ಸ್ಪೀಡ್ ಲಿಮಿಟ್ ಇಲ್ಲ ಅಂತ ಜನರಲ್ಲಿ ತಪ್ಪು ತಿಳುವಳಿಕೆ ಇದೆ ಎಂದು ಮಂಡ್ಯದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು ಕಳೆದ ವರ್ಷ ಮದ್ರಾಸ್ ಹೈಕೋರ್ಟ್ ಸ್ಪೀಡ್ ಲಿಮಿಟ್ ಬಗ್ಗೆ ಸೂಚನೆ ನೀಡಿದ್ದು, ಎಕ್ಸ್‌ಪ್ರೆಸ್ ಹೈವೇ ನಲ್ಲಿ ಗರಿಷ್ಠ 100 ಕಿಲೋಮೀಟರ್ ಸ್ಪೀಡ್ ಇದ್ದು ಕೆಲವರಲ್ಲಿ ಅದು 120 ಕಿಲೋಮೀಟರ್ ಗರಿಷ್ಠ ಸ್ಪೀಡ್ ಇದೆ ಅನ್ನೋ ತಪ್ಪು ತಿಳುವಳಿಕೆ ಇರುವುದು ತಿಳಿದು ಬಂದಿದೆ. ಈ ಮೊದಲು ಹೆದ್ದಾರಿ ಪ್ರಾಧಿಕಾರದಿಂದ ವೇಗಮಿತಿ 120 ಕಿಮಿ ಇದ್ದು ,ಆದರೆ ಮದ್ರಾಸ್ ಹೈಕೋರ್ಟ್ ನ ಆಕ್ಷೇಪಣೆಯಿಂದ ಅಪಘಾತಗಳನ್ನು ತಪ್ಪಿಸುವ ಸಲುವಾಗಿ ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 100 ಕ್ಕೆ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದರು. ವೇಗ ಮಿತಿ ಸಂಬಂಧವಾಗಿ ಮುಂದೆ ಯಾವುದಾದರೂ ದೊಡ್ಡ ಅಪಘಾತಗಳು ಸಂಭವಿಸಿದರೆ ಅದನ್ನು ಹೆದ್ದಾರಿ ಪ್ರಾದಿಕಾರದ ನಿರ್ಲಕ್ಷ ಎಂದು ಪರಿಗಣಿಸಿ ಅವರ ಮೇಲೂ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು .