ಮೈಸೂರು: ಎಸ್.ಬಿ.ಆರ್.ಆರ್ ಮಹಾಜನ ಪಿ.ಯು ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್), ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಥಿಯೇಟರ್ ಫೋಕ್ಸ್ ತಂಡ ಮೈಸೂರು ಸಂಯುಕ್ತಾಶ್ರಯದಲ್ಲಿ ದಿನಾಂಕ 10 ಜೂನ್ 2023 ಶನಿವಾರ ರಂದು ಮಧ್ಯಾಹ್ನ 12.00 ಗಂಟೆಗೆ ಜಯಲಕ್ಷ್ಮಿಪುರಂನಲ್ಲಿರುವ ಎಸ್.ಬಿ.ಆರ್.ಆರ್ ಮಹಾಜನ ಪದವಿ ಪೂರ್ವ ಕಾಲೇಜಿನ ವಿವೇಕಾನಂದ ಸಭಾಂಗಣದಲ್ಲಿ ವಿಶ್ವ ನೇತ್ರದಾನ ನೋಂದಣಿ ಶಿಬಿರ ಹಾಗೂ ನೇತ್ರದಾನ ಮಹತ್ವದ ಬಗ್ಗೆ ಜಾಗೃತಿ ಅಭಿಯಾನ ಆಯೋಜನೆ ಮಾಡಲಾಗಿದೆ. ನೇತ್ರದಾನ ಮಾಡಿದ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ಎಂದು ಪ್ರಾಂಶುಪಾಲರು ಎಸ್. ವಿಷಕಂಠಮೂರ್ತಿ ತಿಳಿಸಿರುತ್ತಾರೆ.