Friday, April 11, 2025
Google search engine

Homeಅಪರಾಧಕಾನೂನುಗಂಡನ ವೃದ್ಧ ಪೋಷಕರನ್ನು ನೋಡಿಕೊಳ್ಳುವಲ್ಲಿ ವಿಫಲವಾದರೆ ಅದು ಕ್ರೌರ್ಯವಲ್ಲ: ಅಲಹಾಬಾದ್ ಹೈಕೋರ್ಟ್

ಗಂಡನ ವೃದ್ಧ ಪೋಷಕರನ್ನು ನೋಡಿಕೊಳ್ಳುವಲ್ಲಿ ವಿಫಲವಾದರೆ ಅದು ಕ್ರೌರ್ಯವಲ್ಲ: ಅಲಹಾಬಾದ್ ಹೈಕೋರ್ಟ್

ಗಂಡನ ವೃದ್ಧ ಪೋಷಕರನ್ನು ನೋಡಿಕೊಳ್ಳುವಲ್ಲಿ ವಿಫಲವಾದರೆ ಅಂತಹ ಆರೋಪ ವ್ಯಕ್ತಿನಿಷ್ಠ ಸ್ವರೂಪದ್ದಾಗಿರುವುದರಿಂದ ಅದು ಕ್ರೌರ್ಯ ಎನಿಸದು ಎಂದು ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ತನ್ನ ವೃದ್ಧ ಪೋಷಕರನ್ನು ನೋಡಿಕೊಳ್ಳುವ ನೈತಿಕ ಕರ್ತವ್ಯ ನಿಭಾಯಿಸದೇ ಇರುವುದರಿಂದ ಪತ್ನಿಯಿಂದ ತನಗೆ ವಿಚ್ಛೇದನ ಬೇಕು ಎಂದು ಕೋರಿ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೌಮಿತ್ರಾ ದಯಾಳ್ ಸಿಂಗ್ ಮತ್ತು ಡೊನಡಿ ರಮೇಶ್ ಅವರಿದ್ದ ವಿಭಾಗೀಯ ಪೀಠ ಈ ವಿಚಾರ ತಿಳಿಸಿದೆ.

ಆರೈಕೆಯ ಮಟ್ಟ ಎಷ್ಟು ಅಗತ್ಯವಿತ್ತು ಇಲ್ಲವೇ ಅಪೇಕ್ಷಣೀಯ ಎಂಬುದನ್ನು ಪತಿ ಹೇಳಿಲ್ಲ. ಅಲ್ಲದೆ ಅಮಾನವೀಯ ಇಲ್ಲವೇ ಕ್ರೂರ ವರ್ತನೆ ಘಟಿಸಿದೆ ಎಂದು ಅವರು ಮನವಿಯಲ್ಲಿ ಎಲ್ಲಿಯೂ ತಿಳಿಸಿಲ್ಲ ಎಂಬುದಾಗಿ ನ್ಯಾಯಾಲಯ ನುಡಿಯಿತು.

ವೃದ್ಧ ಪೋಷಕರ ಆರೈಕೆ ಮಾಡುತ್ತಿಲ್ಲ ಎಂದು ಮತ್ತೊಬ್ಬ ಸಂಗಾತಿ (ಪತಿ) ವೈವಾಹಿಕ ಗೃಹದಿಂದ ದೂರ ವಾಸಿಸಲು ನಿರ್ಧರಿಸಿದರೆ ಆಗ ಪತ್ನಿಯ ನಡೆ ಎಂದಿಗೂ ಕ್ರೌರ್ಯವಾಗದು. ಪ್ರತಿ ಮನೆಯಲ್ಲಿಯೂ ಎಂತಹ ನಿಖರ ಸ್ಥಿತಿ ಇದೆ ಎಂಬುದನ್ನು ವಿವರವಾಗಿ ಪರಿಶೀಲಿಸುವ ನಿಟ್ಟಿನಲ್ಲಿ ನ್ಯಾಯಾಲಯ ಯಾವುದೇ ಕಾನೂನು ಅಥವಾ ಸಿದ್ಧಾಂತ ರೂಪಿಸಲಾಗದು ಎಂದು ಅದು ವಿವರಿಸಿದೆ.

ಪತಿ ಈ ಹಿಂದೆ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ನೀಡುವಂತೆ ಕೋರಿ ಮೊರಾದಾಬಾದ್‌ನ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.ಆದರೆ ಅರ್ಜಿ ತಿರಸ್ಕೃತಗೊಂಡ ಪರಿಣಾಮ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪತ್ನಿ ಕೌರ್ಯ ಎಸಗಿಲ್ಲ ಎಂದು ತೀರ್ಪು ನೀಡಿದ ಹೈಕೋರ್ಟ್‌ ವಿಚ್ಚೇದನ ಅರ್ಜಿ ವಜಾಗೊಳಿಸಿದ ವಿಚಾರಣಾ ನ್ಯಾಯಾಲಯದ ಕ್ರಮದಲ್ಲಿ ಯಾವುದೇ ತಪ್ಪಿಲ್ಲ ಎಂದಿದೆ. ಮೇಲ್ಮನವಿಯಲ್ಲಿ ಹುರುಳಿಲ್ಲವಾದ್ದರಿಂದ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಅದು ತಿಳಿಸಿದೆ.

RELATED ARTICLES
- Advertisment -
Google search engine

Most Popular