ಮೈಸೂರು: ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವವನ್ನು ಶ್ರೀ ಸುತ್ತೂರುಕ್ಷೇತ್ರದಲ್ಲಿ ೨೦೨೪ ಫೆಬ್ರವರಿ ೬ ಮಂಗಳವಾರದಿಂದ ೧೧ ಭಾನುವಾರದವರೆಗೆ ನೆರವೇರಿಸಲುಇದೇ ೧೭ರಂದು ಮೈಸೂರು ಶ್ರೀಮಠದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿತೀರ್ಮಾನಿಸಲಾಯಿತು.
ಜಾತ್ರಾ ಮಹೋತ್ಸವದಲ್ಲಿ ಫೆಬ್ರವರಿ ೭ರಂದು ಉಚಿತ ಸಾಮೂಹಿಕ ವಿವಾಹ, ೮ರಂದು ರಥೋತ್ಸವ, ೯ರಂದು ಶ್ರೀ ಮಹದೇಶ್ವರ ಕೊಂಡೋತ್ಸವ, ೧೦ರಂದು ತೆಪ್ಪೋತ್ಸವಗಳಿರುತ್ತವೆ. ಕರ್ತೃಗದ್ದುಗೆ, ಮಹದೇಶ್ವರ, ವೀರಭದ್ರೇಶ್ವರದೇವಸ್ಥಾನ ಮುಂತಾದ ಕಡೆಗಳಲ್ಲಿ ವಿಶೇಷ ಪೂಜಾಕೈಂಕರ್ಯಗಳು ನಡೆಯಲಿವೆ ವಸ್ತುಪ್ರದರ್ಶನ, ಸಾಮೂಹಿಕ ವಿವಾಹ, ದೇಶಿ ಆಟಗಳು, ಭಜನಾ ಮೇಳ, ಕೃಷಿಮೇಳ, ದನಗಳ ಜಾತ್ರೆ, ಕುಸ್ತಿ ಪಂದ್ಯಾವಳಿ, ಚಿತ್ರಕಲೆ, ರಂಗೋಲಿ, ಸೋಬಾನೆ ಪದ, ಗಾಳಿಪಟ ಸ್ಪರ್ಧೆ ಹಾಗೂ ಸಾಂಸ್ಕೃತಿಕಕಾರ್ಯಕ್ರಮ ಮೊದಲಾದವುಗಳನ್ನು ಎಂದಿನಂತೆಆಯೋಜಿಸಲಾಗುವುದು. ಆಸಕ್ತರುಜೆಎಸ್‌ಎಸ್ ಮಹಾವಿದ್ಯಾಪೀಠದಜಾತ್ರಾ ಮಹೋತ್ಸವ ಸಮಿತಿಯಕಚೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.