Monday, December 2, 2024
Google search engine

Homeಅಪರಾಧಬಾಂಗ್ಲಾ ಪ್ರಜೆಗಳಿಗೆ ನಕಲಿ ಗುರುತಿನ ಚೀಟಿ: ಆರೋಪಿ ಬಂಧನ

ಬಾಂಗ್ಲಾ ಪ್ರಜೆಗಳಿಗೆ ನಕಲಿ ಗುರುತಿನ ಚೀಟಿ: ಆರೋಪಿ ಬಂಧನ

ಬೆಂಗಳೂರು: ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತದೊಳಗೆ ನುಸುಳಿ ಬಂದವರಿಗೆ ನಕಲಿ ಗುರುತಿನ ಚೀಟಿ, ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರೋಪಿಯೊಬ್ಬರನ್ನು ಸೂರ್ಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಅರ್ನಾಬ್ ಮಂಡಲ್ ಅವರನ್ನು ಬಂಧಿಸಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಬಾಡಿಗೆ ಕರಾರು ಪತ್ರವನ್ನು ವಶಪಡಿಸಿಕೊಂಡಿದ್ದಾರೆ.

ಒಂದು ವರ್ಷದಿಂದ ಸುಮಾರು ವಾಸವಿದ್ದ ಆರೋಪಿ, ಸೂರ್ಯಸಿಟಿ ಬಳಿ ಸೈಬರ್ ಸೆಂಟರ್ ತೆರೆದು ಬಾಂಗ್ಲಾ ನುಸುಳುಕೋರರಿಗೆ ನಕಲಿ ಕಾರ್ಡ್ ಮತ್ತು ಇತರ ದಾಖಲೆಗಳನ್ನು 8 ರಿಂದ 10 ಸಾವಿರಕ್ಕೆ ತಯಾರಿಸಿಕೊಡುತ್ತಿದ್ದ’ ಎಂದು ಪಟ್ಟಿಯಿಂದ ಹೊರಬಿದ್ದಿದೆ. ಇತ್ತೀಚೆಗೆ ಬಾಂಗ್ಲಾದೇಶ ಪ್ರಜೆಗಳನ್ನು ಬಂಧಿಸಿದ ವೇಳೆ ಅವರ ಬಳಿ ನಕಲಿ ಗುರುತಿನ ಚೀಟಿಗಳು ಇದ್ದವು. ಈ ಎಲ್ಲ ನಕಲಿ ಗುರುತಿನ ಚೀಟಿಗಳು ಪಶ್ಚಿಮ ಬಂಗಾಳ ವಿಳಾಸದ್ದಾಗಿವೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯಾಗಿದ್ದ ಸೈಬರ್ ಸೆಂಟರ್ ಮೇಲೆ ಗುರುವಾರ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಮನೆಗಳ ಬಾಡಿಗೆ ಕರಾರು ಪತ್ರಗಳು ಇವೆ. ಗ್ರಾಮಾಂತರ ಎಸ್‌ಪಿ ಸಿ.ಕೆ.ಬಾಬಾ ಮಾತನಾಡಿ,


ಬಾಂಗ್ಲಾದೇಶದ ಪ್ರಜೆಗಳಿಗೆ ನಕಲಿ ಆಧಾರ್, ಗುರುತಿನ ಚೀಟಿ ಮಾಡಿಕೊಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಒಂದು ವರ್ಷದಿಂದ ಇದೇ ರೀತಿ ನಕಲಿ ದಾಖಲೆ ಸೃಷ್ಟಿಸಿ ಕೊಡುತ್ತಿದ್ದ. ದಾಳಿ ವೇಳೆ ನಕಲಿ ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು. `೧೮ ಮನೆಗಳ ಬಾಡಿಗೆ ಕರಾರು ಪತ್ರ, ೫೫ ಆಧಾರ್ ಕಾರ್ಡ್, ಎರಡು ಕಂಪ್ಯೂಟರ್, ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ. ಒಂದು ಕಾರ್ಡ್ ಮಾಡಿಕೊಡಲು ೮ ಸಾವಿರದಿಂದ ೧೦ ಸಾವಿರ ಪಡೆಯುತ್ತಿದ್ದ. ನಕಲಿ ಗುರುತಿನ ಚೀಟಿ ದಂಧೆಯಲ್ಲಿ ಹಲವರು ಶಾಮೀಲಾಗಿದ್ದು, ಅವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ’ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular