Friday, April 4, 2025
Google search engine

Homeಅಪರಾಧನೌಕರಿಗಾಗಿ ನಕಲಿ ಅಂಕಪಟ್ಟಿ: ಎಫ್‌ಐಆರ್ ದಾಖಲು

ನೌಕರಿಗಾಗಿ ನಕಲಿ ಅಂಕಪಟ್ಟಿ: ಎಫ್‌ಐಆರ್ ದಾಖಲು

ಮಂಡ್ಯ: `ಇಲ್ಲಿನ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ನಕಲಿ ಅಂಕಪಟ್ಟಿಗಳನ್ನು ಕೊಟ್ಟಿದ್ದಾರೆ’ ಎಂಬ ಆರೋಪದ ಮೇರೆಗೆ ವಿ.ವಿನೋದ್ ಎಂಬುವವರ ವಿರುದ್ಧ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಅರಸಿನಕುಂಟೆಯ ಆದರ್ಶ ನಗರದ ನಿವಾಸಿ. ೨೦೨೨ರಲ್ಲಿ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಸ್ನಾತಕೋತ್ತರ ಪದವಿಯನ್ನು (ಎಂ.ಟೆಕ್ ಇನ್ ಸಿವಿಲ್ ಎಂಜಿನಿಯರಿಂಗ್) ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ (ಕೆಎಸ್‌ಒಯು) ಪ್ರಥಮ ದರ್ಜೆಯೊಂದಿಗೆ ಪಡೆದಿರುವುದಾಗಿ ಹೇಳಿ, ೨೦೧೬ನೇ ಸಾಲಿನನಕಲಿ ಅಂಕಪಟ್ಟಿ ಸಲ್ಲಿಸಿದ್ದಾರೆ’ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ದೂರು ಸಲ್ಲಿಸಿದ್ದರು.

`ವಿನೋದ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿರ್ಮಿತಿ ಕೇಂದ್ರದಲ್ಲಿ ೨೦೧೪ರಿಂದ ೨೦೧೯ರವರೆಗೆ ಸಹಾಯಕ ಯೋಜನಾ ವ್ಯವಸ್ಥಾಪಕರಾಗಿ ಹಾಗೂ ಕೆಆರ್‌ಐಡಿಎಲ್‌ನಲ್ಲೂ ಕರ್ತವ್ಯ ನಿರ್ವಹಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಕಲಿ ಅಂಕಪಟ್ಟಿ ಸಲ್ಲಿಸಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ದೂರು ಪತ್ರದಲ್ಲಿ ಒತ್ತಾಯಿಸಿದ್ದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯ ಆಯ್ಕೆ ಸಮಿತಿಯು ೨೦೨೩ರಲ್ಲಿ ವಿನೋದ್ ಅವರನ್ನು ವ್ಯವಸ್ಥಾಪಕರ ಹುದ್ದೆಗೆ ಆಯ್ಕೆ ಮಾಡಿದ್ದರ ಬಗ್ಗೆ ಆಕ್ಷೇಪಿಸಿದ್ದ ಗುತ್ತಿಗೆದಾರ ರವಿಕುಮಾರ್ ಎಂಬುವವರು ದೂರು ಅರ್ಜಿ ಸಲ್ಲಿಸಿದ್ದರು. ಆಗ, ಅಂಕಪಟ್ಟಿಯ ನೈಜತೆ ಪರಿಶೀಲಿಸಲು ಮುಕ್ತ ವಿವಿ ಕುಲಸಚಿವರಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದರು. ವಿನೋದ್ ಸ್ನಾತಕೋತ್ತರ ಪದವಿ ಪಡೆದಿಲ್ಲ ಎಂದು ಮುಕ್ತ ವಿವಿ ಮಾಹಿತಿ ನೀಡಿತ್ತು. ಹೀಗಾಗಿ ವಿನೋದ್ ಅವರ ಆಯ್ಕೆಯನ್ನು ರದ್ದುಗೊಳಿಸಲಾಗಿತ್ತು.

RELATED ARTICLES
- Advertisment -
Google search engine

Most Popular