Friday, April 11, 2025
Google search engine

Homeಅಪರಾಧಬೆಂಗಳೂರು ಪೊಲೀಸ್ ಇಲಾಖೆ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ: ವೈದ್ಯಕೀಯ ವಿದ್ಯಾರ್ಥಿ ಬಂಧನ

ಬೆಂಗಳೂರು ಪೊಲೀಸ್ ಇಲಾಖೆ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ: ವೈದ್ಯಕೀಯ ವಿದ್ಯಾರ್ಥಿ ಬಂಧನ

ಚೆನ್ನೈ(ತಮಿಳುನಾಡು): ಬೆಂಗಳೂರು ಪೊಲೀಸ್ ಇಲಾಖೆ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಆರಂಭಿಸಲಾಗಿದ್ದು, ಈ ಸಂಬಂಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಇಲಾಖೆಯಲ್ಲಿರುವ ರವಿ ಎಂಬ ಕಾನ್ಸ್​ಟೇಬಲ್​ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ತನಿಖೆಯಲ್ಲಿ ಸಾಮಾಜಿಕ ಜಾಲತಾಣ ಬಳಸುವ ಕಂಪ್ಯೂಟರ್ ಮತ್ತು ನಕಲಿ ಟ್ವಿಟರ್ ಖಾತೆಯಿಂದ ಪೋಸ್ಟ್‌ ಗಳನ್ನು ಪೋಸ್ಟ್ ಮಾಡುವ ಐಪಿ ವಿಳಾಸವನ್ನು ಗುರುತಿಸಲಾಗಿತ್ತು. ಈ ವೇಳೆ, ತಮಿಳುನಾಡಿನ ಚೆನ್ನೈನ ಸೇತುಪಟ್ಟು ಪ್ರದೇಶದಲ್ಲಿ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿ ಮಹೇಶ್ ಕುಮಾರ್ ಎಂಬಾತ ಈ ನಕಲಿ ಸಾಮಾಜಿಕ ಜಾಲತಾಣ ಖಾತೆ ಸೃಷ್ಟಿಸಿರುವುದು ಬಹಿರಂಗವಾಗಿದೆ.

ಅವರು Blrcitypolicee ಹೆಸರಿನಲ್ಲಿ ನಕಲಿ ಟ್ವಿಟ್ಟರ್​ ಖಾತೆಯನ್ನು ರಚಿಸಿದ್ದರು. IPL ರನ್​ ಗಳನ್ನು ಪೋಸ್ಟ್ ಮಾಡಿದ್ದರು. ಇದು ನಿಜವಾದ ಬೆಂಗಳೂರು ಪೊಲೀಸ್ ಇಲಾಖೆಯ ಟ್ವಿಟ್ಟರ್ ಖಾತೆಯಂತೆ ಕಾಣುವ ಕಾರಣ ಅನೇಕ ಜನರು ಫಾಲೋ ಮಾಡಿದ್ದರು. ಬೆಂಗಳೂರು ಪೊಲೀಸ್ ಇಲಾಖೆಯ ಹೆಸರಿನಲ್ಲಿ ಲೈಕ್ ಮತ್ತು ಶೇರ್​ಗಾಗಿ ಟ್ವಿಟರ್ ಖಾತೆ ಆರಂಭಿಸಿರುವುದಾಗಿ ಮಹೇಶ್ ಕುಮಾರ್ ಹೇಳಿದ್ದಾರೆ.

ತಿರುವಣ್ಣಾಮಲೈ ಮೂಲದ ಮಹೇಶ್ ಕುಮಾರ್ ಚೆನ್ನೈ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಾರೆ. ನಂತರ ಬೆಂಗಳೂರು ಪೊಲೀಸರು ಮಹೇಶ್ ಕುಮಾರ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಮಹೇಶ್ ಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ತನಿಖೆಗೆ ಅಗತ್ಯವಿದ್ದಾಗ ಹಾಜರಾಗುವಂತೆ ಸೂಚಿಸಿದ್ದಾರೆ. ಸದ್ಯ ಬೆಂಗಳೂರು ಪೊಲೀಸರು ಮಹೇಶ್​ ಕುಮಾರ್ ಅವರನ್ನು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.

RELATED ARTICLES
- Advertisment -
Google search engine

Most Popular