Monday, April 21, 2025
Google search engine

Homeರಾಜ್ಯಸುದ್ದಿಜಾಲಉರುಳಿದ ಬಿದ್ದ ಮಾವಿನ ಮರ: ಹಣ್ಣಿಗಾಗಿ ಮುಗಿ ಬಿದ್ದ ಜನ

ಉರುಳಿದ ಬಿದ್ದ ಮಾವಿನ ಮರ: ಹಣ್ಣಿಗಾಗಿ ಮುಗಿ ಬಿದ್ದ ಜನ

ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿದ್ದ ಭಾರಿ ಗಾತ್ರದ ಮಾವಿನ ಮರವೊಂದು ಧರಶಾಯಿಯಾದ ಘಟನೆ ನಡೆದಿದೆ. ಈ ಘಟನೆಯಿಂದ ಮರದ ಪಕ್ಕದಲ್ಲೇ ಪಾರ್ಕ್ ಮಾಡಲಾಗಿದ್ದ ವಾಹನಗಳಿಗೆ ಯಾವುದೇ ಹಾನಿಯಾಗದೆ ಪಾರಾಗಿದ್ದು, ಬಿದ್ದ ಮರದಲ್ಲಿದ್ದ ಮಾವಿನ ಕಾಯಿ ಕೊಯ್ಯಲು ಜನ ಮುಗಿ ಬಿದ್ದ ಘಟನೆ ನಡೆದಿದೆ.

ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲೇ ಹಲವು ವರ್ಷಗಳಿಂದ ಇದ್ದ ಮಾವಿನ ಮರವೊಂದು ಸಂಜೆ ವೇಳೆ ಆಕಸ್ಮಿಕವಾಗಿ ಧರಶಾಯಿಯಾಗಿದೆ. ಸದಾ ಜನರ ಸಂಪರ್ಕದಲ್ಲಿರುವ ಈ ಸ್ಥಳದಲ್ಲಿ ಮರ ಬಿದ್ದ ಸಂದರ್ಭ ಯಾರೂ ಇಲ್ಲದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಮರದ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಒಂದು ಟೆಂಪೋ ಮತ್ತು ದ್ವಿಚಕ್ರ ವಾಹನಕ್ಕೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಮಾವಿನ ಮರ ತುಂಬಾ ಮಾವಿನ ಕಾಯಿ ತುಂಬಿದ್ದರಿಂದ ಜನರೆಲ್ಲರೂ ಮಾವಿನ ಕಾಯಿ ಹೆಕ್ಕುವುದರಲ್ಲಿ ನಿರತರಾಗಿದ್ದಾರೆ.

RELATED ARTICLES
- Advertisment -
Google search engine

Most Popular