Friday, April 4, 2025
Google search engine

Homeರಾಜ್ಯಜೀವನದಿ ಹೇಮಾವತಿ ಜಲಾಶಯದಲ್ಲಿ ಕುಸಿದ ನೀರಿನ ಮಟ್ಟ

ಜೀವನದಿ ಹೇಮಾವತಿ ಜಲಾಶಯದಲ್ಲಿ ಕುಸಿದ ನೀರಿನ ಮಟ್ಟ

ಹಾಸನ: ಜೀವನದಿ ಗೊರೂರಿನ ಹೇಮಾವತಿ ಜಲಾಶಯದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

37 TMC ಸಾಮರ್ಥ್ಯ ದ ಹೇಮಾವತಿ ಜಲಾಶಯದಲ್ಲಿ ಈಗ 15 TMC ನೀರು ಮಾತ್ರ ಇದೆ. ಇದರಲ್ಲಿ 11 TMC ಮಾತ್ರ ಬಳಕೆಗೆ ಲಭ್ಯವಾಗಲಿದೆ/

ಈಗಾಗಲೇ ಎಡನಾಲೆ, ಬಲನಾಲೆಗಳಿಗೆ ನೀರು ಹರಿವು ಸ್ಥಗಿತಗೊಂಡಿದ್ದು, ನದಿಗೆ ಮಾತ್ರ 3 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ..

10 ದಿನದಲ್ಲಿ ಸಾಕಷ್ಟು ಮಳೆಯಾಗದಿದ್ದಲ್ಲಿ ಹೇಮಾವತಿ ನದಿ ಒಡಲು ನೀರಿಲ್ಲದೆ ಸಂಕಷ್ಟ ಎದುರಿಸುವ ‌ಸಾಧ್ಯತೆ ಇದೆ.

ಹಾಸನ ಮಾತ್ರವಲ್ಲದೇ ತುಮಕೂರು ಮತ್ತು ಮಂಡ್ಯ ಮಂದಿಯು ಹೇಮಾವತಿ ಜಲಾಶಯದ ನೀರು ಉಪಯೋಗಿಸುವವರಾಗಿದ್ದು, ಮಳೆಯಾಗದಿದ್ದರೆ ಮುಂದೇನು ಎಂಬ ಚಿಂತೆ ಜನರನ್ನು ಕಾಡುತ್ತಿದೆ.

RELATED ARTICLES
- Advertisment -
Google search engine

Most Popular