Friday, April 18, 2025
Google search engine

Homeರಾಜ್ಯಸುದ್ದಿಜಾಲಅನುದಾನದ ಬಿಡುಗಡೆ ವಿಚಾರವಾಗಿ ಸುಳ್ಳು ಹೇಳಿಕೆ:ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಪ್ರತಿಭಟನೆ

ಅನುದಾನದ ಬಿಡುಗಡೆ ವಿಚಾರವಾಗಿ ಸುಳ್ಳು ಹೇಳಿಕೆ:ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಪ್ರತಿಭಟನೆ

ಹೆಚ್‌.ಡಿ.ಕೋಟೆ: ಪಟ್ಟಣದ ಗದ್ದಿಗೆ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ವಾಲ್ಮೀಕಿ ಸಮುದಾಯ ಭವನ ನಿರ್ಮಾಣದ ಕಾಮಗಾರಿಯ ಅನುದಾನದ ವರದಿಯ ಸತ್ಯಾಸತ್ಯತೆ ಮರೆಮಾಚಿ ಶಾಸಕ ಅನಿಲ್ ಚಿಕ್ಕಮಾದು ಪರವಾಗಿ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯ ಪಾಲಕ ಅಭಿಯಂತರಾದ ನಾಗರಾಜು ಅವರು ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ, ಸಮಗ್ರ ದಾಖಲಾತಿ ನೀಡುವಂತೆ ಒತ್ತಾಯಿಸಿ ಪಟ್ಟಣದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ತಮ್ಮ ಬೆಂಬಲಿಗರು, ನಾಯಕ ಸಮುದಾಯದವರೊಡನೆ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ಅವರು ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಅಭಿಯಂತರಾದ ನಾಗರಾಜು ಅವರು ವಾಲ್ಮೀಕಿ ಭವನ ನಿರ್ಮಾಣದ ಕಾಮಗಾರಿಯ ಅನುದಾನದ ಬಿಡುಗಡೆ ವರದಿಯ ವಿಚಾರವಾಗಿ ಸುಳ್ಳು ಹೇಳಿಕೆ ನೀಡಿ ಸಮುದಾಯದವರು ಮತ್ತು ಜನಸಾಮಾನ್ಯ ರಲ್ಲಿ ಗೊಂದಲ ಸೃಷ್ಟಿಸಿ, ನಾನು ಶಾಸಕನಾಗಿದ್ದಾಗ ಬಿಡುಗಡೆ ಮಾಡಿದ್ದ ಅನುದಾನದ ವಿವರವನ್ನು ಮರೆಮಾಚಿ ಬೇರೆಯವರಿಗೆ ಅನುಕೂಲವಾಗುವ ರೀತಿ ಹೇಳಿಕೆ ನೀಡಿದ್ದಾರೆ ಎಂದು ಕಳೆದ ತಿಂಗಳು ಜಿಪಂ ಕಚೇರಿಗೆ ಮುತ್ತಿಗೆ ಹಾಕಿ ನಾಗರಾಜು ಅವರನ್ನು ತರಾಟೆಗೆ ತೆಗೆದುಕೊಂಡಾಗ, ಸಮಗ್ರ ವರದಿಯನ್ನು ವಾರದೊಳಗೆ ಕೊಡುತ್ತೇವೆ ಎಂದು ಹೇಳಿದ್ದರು.

ಆದರೆ, ಈವರೆಗೂ ಸೂಕ್ತ ದಾಖಲಾತಿ ಒದಗಿಸಿಲ್ಲ, ನೆನ್ನೆಯಿಂದಲೂ ನಾವು ಪ್ರತಿಭಟನೆ ಮಾಡುತ್ತಿದ್ದರು ಸೂಕ್ತ ದಾಖಲಾತಿ ನೀಡಿಲ್ಲ, ಇಂದು ದಾಖಲಾತಿ ನೀಡಲು ಬಂದರೆ ನನಗೆ ಆ ದಾಖಲಾತಿ ಬೇಕಾಗಿಲ್ಲ ಎಂದರು. ನನ್ನ ಅಧಿಕಾರದ ಅವಧಿಯಲ್ಲಿ ಸಮುದಾಯ ಭವನಕ್ಕೆ ನೀಡಿರುವ ಜಾಗ ಮತ್ತು 1.40 ಕೋಟಿ ರೂ. ಬಿಡುಗಡೆಯ ದಾಖಲಾತಿಯನ್ನು ನಾನೆ ತಂದಿದ್ದೇನೆಎಂದರು. ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯ ಪಾಲಕ ಅಭಿಯಂತರದ ನಾಗರಾಜು ಮಾತನಾಡಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಅವರು ವಾಲ್ಮೀಕಿ ಸಮುದಾಯದ ಭವನಕ್ಕೆ ಸಂಬಂಧಿಸಿದಂತೆ ಪೂರ್ವ ದಾಖಲಾತಿ ವಿವರಣ ಗಳನ್ನ ನೀಡಿ ಎಂದು ಕಳೆದ ತಿಂಗಳು ಕಚೇರಿಯಲ್ಲಿ ತಿಳಿಸಿದ್ದರು. ಅದರಂತೆ ನಾನು ನಮ್ಮ ಇಲಾಖೆಯಲ್ಲಿದ್ದಂತ ವಿವರಗಳನ್ನು ಅವರಿಗೆ ತಿಳಿಸಿದ್ದೆ, ಅದರಂತೆ ಅವರ ಅವಧಿಯಲ್ಲಿ ನಡೆದ ಕಾಮಗಾರಿಗಳ ಬಗ್ಗೆ ಬೇರೆ ಇಲಾಖೆಯಲ್ಲಿ ಇದ್ದ ಸಂಪೂರ್ಣ ದಾಖಲಾತಿ ವಿವರಗಳನ್ನು ಅವರಿಗೆ ಇಂದು ನೀಡಲಿದ್ದೇನೆ ಎಂದು ತಿಳಿಸಿದರು.

ನನ್ನ ಬಳಿ ಇದ್ದಂತ ಸಂಪೂರ್ಣ ದಾಖಲಾತಿ ವಿವರಗಳನ್ನ ಶಿರಸ್ತೆದಾರ್ ಮಹೇಶ್ ಅವರಿಗೆ ನೀಡಿದ್ದೆನೆ, ನನ್ನ ಅವಧಿಯಲ್ಲಿ ಯಾವುದೇ ಹಣ ಬಿಡುಗಡೆಯಾಗಿಲ್ಲ ಎಂದು ಸುಳ್ಳು ಮಾಹಿತಿಗಳನ್ನ ನೀಡಿರುವ ಸಹಾಯಕ ಕಾರ್ಯಪಾಲಕ ಅಭಿಯಂತರಾದ ನಾಗರಾಜು ಅವರನ್ನ ಅಮಾನತುಗೊಳಿಸಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ.

ಪ್ರತಿಭಟನೆಯಲ್ಲಿ ತಾಲೂಕು ನಾಯಕ ಸಂಘದ ಪ್ರಧಾನ ಕಾರ್ಯದರ್ಶಿ ಚಾಕಳ್ಳಿ ಕೃಷ್ಣ, ಮುಖಂಡ ರುಗಳಾದ ಚಾ ನಂಜುಂಡ ಮೂರ್ತಿ, ಕೋಟೆ ಕೃಷ್ಣನಾಯ್ಕ ಸರಗೂರು ಚೆನ್ನಪ್ಪ, ಮಾದೇವ ನಾಯಕ, ಜವರ ನಾಯ್ಕ, ಸಿದ್ದರಾಜು, ನಾಯಕ , ಸಣ್ಣ, ಸೋಮನಾಯಕ, ಗಣೇಶ, ರಮೇಶ, ಕಾಂತನಾಯ್ಕ, ನಿಂಗನಾಯಕ, ಮಾದೇವ ನಾಯಕ, ಚನಾಯಕ, ನವೀನ, ಬೋರ್‌ವೆಲ್ ಆನಂದ್, ವೀರನಾಯಕ, ಸ್ವಾಮಿ, ಬೆಟ್ಟಪ್ಪ, ನಾಗರಾಜು, ರವಿ, ಬೆಟ್ಟ ನಾಯಕ, ಹಲಸೂರು ಗೋವಿಂದರಾಜು, ದೇವನಾಯಕ, ಗಣೇಶ, ಚನ್ನನಾಯಕ, ಕಾಂತನಾಯಕ ಸೋಮನಾಯಕ, ಸಣ್ಣಸ್ವಾಮಿ ನಾಯಕ, ಚೆನ್ನಪ್ಪ, ಚಿಕ್ಕತಿಮ್ಮ ನಾಯಕ, ಜವರನಾಯಕ, ಸರಗೂರು ನಾಗೇಂದ್ರ, ಚೆನ್ನಪ್ಪ ಸೇರಿದಂತೆ ನಾಯಕ ಸಮುದಾಯ ಹಾಗೂ ಇತರೆ ಸಮುದಾಯದ ಎಲ್ಲಾ ಮುಖಂಡರುಗಳು ಪ್ರತಿಭಟನೆಯಲ್ಲಿ ಹಾಜರಿದ್ದರು. ಸರ್ಕಲ್ ಇನ್ಸ್ಪೆಕ್ಟರ್ ಶಬೀರ್ ಹುಸೈನ್, ಎಸ್ ಐ ಪ್ರಕಾಶ್, ಅಧಿಕಾರಿಗಳಾದ ನಿಂಗರಾಜು ಹಾಜರಿದ್ದರು.

RELATED ARTICLES
- Advertisment -
Google search engine

Most Popular