ಮಂಡ್ಯ:ಕೌಟುಂಬಿಕ ಕಲಹದಿಂದ ಮಹಿಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಮಂಡ್ಯದ ನೆಹರು ನಗರ ಪೂರ್ವ ಬಡಾವಣೆಯಲ್ಲಿ ನಡೆದಿದೆ. ಪದ್ಮ.ವಿ (36) ಮೃತಪಟ್ಟ ಮಹಿಳೆ. ರಾಮನಗರ ತಾಲೂಕಿನ ಅಂಕನಹಳ್ಳಿ ಗ್ರಾಮದಿಂದ ಮಂಡಕ್ಕೆ ಮದುವೆಯಾಗಿದ್ದ ಮೃತ ಮಹಿಳೆ ಪದ್ಮ. ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ ಸಿದ್ದರಾಜು ಎಂಬುವರನ್ನು 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಜೀವನ ನಡೆಸುತ್ತಿದ್ದರು. ಮೃತ ಪದ್ಮಗೆ ಇಬ್ಬರು ಮಕ್ಕಳಿದ್ದರು. ಹಣಕ್ಕಾಗಿ ನಿತ್ಯ ಕಿರುಕುಳ ನೀಡ್ತಿದ್ದ ಪತಿ ಸಿದ್ದರಾಜು.
ಪದ್ಮ ಅವರನ್ನು ತಾಯಿ ಮನೆಗೆ ಕಳುಹಿಸುತ್ತಿರಲಿಲ್ಲ.ಹಣಕ್ಕಾಗಿ ನಿತ್ಯ ಜಗಳವಾಗುತ್ತಿತ್ತು.ಆ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಕುಟುಂಬಸ್ಥರಿಂದ ಆರೋಪ.ಕೊಲೆ ಶಂಕೆ ವ್ಯಕ್ತಪಡಿಸಿರುವ ಮೃತ ಪದ್ಮ ಕುಟುಂಬಸ್ಥರು ಕೊಲೆ ಮಾಡಿ ನೇಣು ಬಿಗಿಯಲಾಗಿದೆ ಎಂದು ಆರೋಪ ಮಾಡಲಾಗಿದ್ದು, ನಿಮ್ಮ ಮಗಳಿಗೆ ಹೃದಯಘಾತವಾಗಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಮಂಡ್ಯ ಪೂರ್ವ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪತಿ ಸಿದ್ದರಾಜು ಅವರನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರೋದು ತಿಳಿದುಬಂದಿದೆ