Friday, April 18, 2025
Google search engine

Homeಅಪರಾಧಕೌಟುಂಬಿಕ ಕಲಹ: ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಕೊಂದ ಪತಿ

ಕೌಟುಂಬಿಕ ಕಲಹ: ದೊಣ್ಣೆಯಿಂದ ಹೊಡೆದು ಪತ್ನಿಯನ್ನು ಕೊಂದ ಪತಿ

ಕನಕಪುರ: ಕೌಟುಂಬಿಕ ಕಲಹಕ್ಕೆ ಬೇಸತ್ತು ವ್ಯಕ್ತಿ ಒಬ್ಬ  ತನ್ನ ಪತ್ನಿಯನ್ನೇ ರಸ್ತೆಯಲ್ಲಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹೊಸಕೋಟೆ ಬಳಿ ನಡೆದಿದೆ.

ನಗರದ ಹನುಮಂತನಗರದ ನಿವಾಸಿ ಅಂಬಿಕಾ (28) ಕೊಲೆಯಾದ ದುರ್ದೈವಿ.

ಈಕೆಯ ಪತಿ ಮುತ್ತುರಾಜು(36) ಆರೋಪಿ ಎಂದು ಗುರುತಿಸಲಾಗಿದ್ದು, ಗ್ರಾಮಾಂತರ ಠಾಣೆ ಪೋಲೀಸರು ಆರೋಪಿಯನ್ನ  ಬಂಧಿಸಿದ್ದಾರೆ.

ಮೂಲತಹ ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮದ ಆರೋಪಿ ಮುತ್ತುರಾಜು ತಾಲೂಕಿನ ರಾಮನಗರ ರಸ್ತೆಯಲ್ಲಿರುವ ಹೊಸಕೋಟೆ ಗ್ರಾಮದ ಅಂಬಿಕಾರನ್ನು ವಿವಾಹವಾಗಿದ್ದರೂ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದು. ದಂಪತಿಗಳಿಬ್ಬರು ನಗರದ ನೀಲಕಂಠೇಶ್ವರ ಶಾಲೆಯ ಸಮೀಪದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಆರೋಪಿ ಮುತ್ತುರಾಜು ಕೋರಿಯಲ್ಲಿ ಕಲ್ಲು ಹೊಡೆಯುವ ಕೆಲಸಕ್ಕೆ ಹೋಗುತ್ತಿದ್ದ ಇತ್ತೀಚಿಗೆ ದಂಪತಿಗಳ ನಡುವೆ ಕೌಟುಂಬಿಕ ಕಲಹ ಹೆಚ್ಚಾಗಿತ್ತು ಇದರಿಂದ ಬೇಸತ್ತ ಆರೋಪಿ ಮುತ್ತುರಾಜು ಪತ್ನಿ ಹಂಪಿಕಾಳಿಂದ ಶಾಶ್ವತವಾಗಿ ದೂರವಾಗಲು ನಿರ್ಧರಿಸಿ ಪತ್ನಿಯನ್ನು ಹೊಸಕೋಟೆಯಲ್ಲಿ ರುವ ಅಂಬಿಕಾಳ ತವರು ಮನೆಯಲ್ಲಿ ಬಿಡುವ ನಿರ್ಧಾರ ಮಾಡಿದ್ದ.

ಪತ್ನಿ ಹಾಗೂ ಮಕ್ಕಳಿಬ್ಬರ ಜೊತೆಗೆ ದ್ವಿಚಕ್ರ ವಾಹನದಲ್ಲಿ ಹೊಸಕೋಟೆಗೆ ಹೊರಟಿದ್ರು ಕೊನೆಯದಾಗಿ ದಂಪತಿಗಳ ಇಬ್ಬರನ್ನು ರಾಜಿ ಸಂಧಾನ ಮಾಡಲು ಕರೆದಿದ್ದ ಸ್ನೇಹಿತರನ್ನು ಭೇಟಿ ಮಾಡಲು ಹೋಗುವಾಗ ಹೊಸಕೋಟೆ ಸಮೀಪದಲ್ಲಿ ಪತ್ನಿ ಅಂಬಿಕಾ ಶೌಚಾಲಯಕ್ಕೆ ತೆರಳಿದರು.

ಆ ಸ್ಥಳದಲ್ಲಿ ದಂಪತಿಗಳಿಬ್ಬರ ನಡುವೆ ಜಗಳ ಶುರುವಾಗಿದೆ. ಗಲಾಟೆಯಲ್ಲಿ ಪತ್ನಿ ಅಂಬಿಕ ಪತಿ ಮುತ್ತುರಾಜನಿಗೆ ಲಘುವಾಗಿ ಮಾತನಾಡಿದ್ದಕ್ಕೆ ಇದರಿಂದ ಕುಪಿತಗೊಂಡ ಆರೋಪಿ ಮುತ್ತುರಾಜು ಕಲ್ಲು ಹೊಡೆಯುವ ಗೂಡಕ್ಕೆ ಹಾಕಿಕೊಳ್ಳಲು ಜೊತೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದ ದೊಣ್ಣೆಯಿಂದ ಪತ್ನಿ ಅಂಬಿಕಾಳ ತಲೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.

ಮಕ್ಕಳಿಬ್ಬರು ತಾಯಿಯ ಮೇಲೆ ಹಲ್ಲೆ ಮಾಡದಂತೆ ಕಣ್ಣೀರಿಟ್ಟು ಬೇಡಿಕೊಂಡರು ಮುತ್ತುರಾಜ್ ಏನು ಮನಸ್ಸು ಕರಗಲಿಲ್ಲ. ಮಕ್ಕಳ ಕಣ್ಣೆದುರಲ್ಲಿ ಪತ್ನಿ ಅಂಬಿಕಾಳ ತಲೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಸಮೀಪದ ಅಂಗಡಿಯ ಬಳಿ ಕುಳಿತಿದ್ದ ಸಾರ್ವಜನಿಕರು ಸ್ಥಳಕ್ಕೆ ಬರುವ ವೇಳೆಗೆ ಅಂಬಿಕಾ ಅಧಿಕ ರಕ್ತಸ್ರಾವವಾಗಿ ಕೆಳಗೆ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಾಜರು ನಡೆಸಿ ಶವವನ್ನ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮುತ್ತುರಾಜನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular