Monday, April 21, 2025
Google search engine

Homeಸಿನಿಮಾತೆಲುಗಿನ ಖ್ಯಾತ ನಟ ಚಂದ್ರಮೋಹನ್ ನಿಧನ

ತೆಲುಗಿನ ಖ್ಯಾತ ನಟ ಚಂದ್ರಮೋಹನ್ ನಿಧನ

ಬೆಂಗಳೂರು: ತೆಲುಗಿನ ಖ್ಯಾತ ನಟ ಚಂದ್ರಮೋಹನ್‌ ಅವರು ಶನಿವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 82 ವರ್ಷವಾಗಿತ್ತು.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೈದರಾಬಾದ್‌ ನ ಅಪೋಲೋ ಆಸ್ಪತ್ರೆಯಲ್ಲಿ ಇಂದು (ಶನಿವಾರ) ಬೆಳಿಗ್ಗೆ 9.45ಕ್ಕೆ ಕೊನೆಯುಸಿರೆಳೆದರು.

ಅವರು ಪತ್ನಿ ಜಲಂಧರಾ ಹಾಗೂ ಇಬ್ಬರು ಪುತ್ರಿಯನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ ಹೈದರಾಬಾದ್‌ ನಲ್ಲಿ ನಡೆಯಲಿದೆ.

ವಿವಿಧ ಪಾತ್ರಗಳ ಮೂಲಕ ತೆರೆ ಮೇಲೆ ಜನರನ್ನು ರಂಜಿಸಿದ್ದ ಚಂದ್ರಮೋಹನ್‌ ಅವರು ನಾಯಕನ ಪಾತ್ರದ ಜತೆಗೆ ಹಾಸ್ಯ ಹಾಗೂ ಪೋಷಕ ಪಾತ್ರಗಳ  ಮೂಲಕ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದರು.

1943ರ ಮೇ 23 ರಂದು ಅವಿಭಜಿತ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಪಮಿಡಿಮುಕ್ಕಲ ಎಂಬಲ್ಲಿ ಜನಿಸಿದ್ದ ಅವರ ಹಿಂದಿನ ಹೆಸರು ಮಲ್ಲಪ್ಪಲ್ಲಿ ಚಂದ್ರಶೇಖರ ರಾವ್.

1996ರಲ್ಲಿ ‘ರಂಗುಲಂ ರತ್ನಂ’ ಚಿತ್ರದ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದ ಅವರು, ಬಳಿಕ ಹಲವು ಹಿಟ್‌ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು.

ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದ ಅವರು, 2017ರಲ್ಲಿ ಕೊನೆಯ ಬಾರಿಗೆ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಅವರ ನಿಧನಕ್ಕೆ ಚಿತ್ರರಂಗದ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

RELATED ARTICLES
- Advertisment -
Google search engine

Most Popular