ಮಂಡ್ಯ: ಮಾಜಿ ಸಚಿವ ನಾರಾಯಣ ಗೌಡರ ಹುಟ್ಟು ಹಬ್ಬಕ್ಕೆ ಹಂಚಲು ತಂದಿದ್ದ ಸಾವಿರಾರು ತೆಂಗಿನ ಸಸಿಗಳನ್ನು ಅಭಿಮಾನಿಗಳು ಹೊತ್ತೊಯ್ದಿರುವ ಘಟನೆ ಕೆ.ಆರ್.ಪೇಟೆಯಲ್ಲಿ ನಡೆದಿದೆ.
ಸಚಿವರು ಹುಟ್ಟು ಹಬ್ಬದ ಕೇಕ್ ಕತ್ತರಿಸುತ್ತಾ ಸಂಭ್ರಮಿಸಿದರೇ, ಅತ್ತ ಅಭಿಮಾನಿಗಳು ಮತ್ತು ಜನರು ಕೈಗೆ ಸಿಕ್ಕಷ್ಟು ತೆಂಗಿನ ಸಸಿ ಹೊತ್ತೊಯ್ದು ಸಂಭ್ರಮ ಪಟ್ಟಿದ್ದಾರೆ.
ಕೈಗೆ ಸಿಕ್ಕಷ್ಟು ಸಸಿಗಳನ್ನು ಬೈಕ್, ಆಟೋ ಸೇರಿದಂತೆ ಇತರ ವಾಹನಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ.