ಗುಂಡ್ಲುಪೇಟೆ: ತಾಲೂಕಿನ ಶಿಂಡನಪುರ ಗ್ರಾಮದ ಪಶು ವೈದಕೀಯ ಕೇಂದ್ರದಲ್ಲಿ ಪಶು ವೈಧ್ಯಾಧಿಕಾರಿಯಾಗಿದ್ದ ಡಾ.ಜಯಪ್ರಕಾಶ್ ವಯೋ ನಿವೃತ್ತಿ ಹೊಂದಿದ ಹಿನ್ನಲೆ ಇಲಾಖೆ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ತಾಲೂಕಿನಲ್ಲಿ ಪಶು ವೈಧ್ಯಾಧಿಕಾರಿಯಾಗಿದ್ದ ಡಾ.ಜಯಪ್ರಕಾಶ್ ಪಶು ಇಲಾಖೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಅವರ ಸೇವೆ ಸ್ಮರಿಸಿ ಪಶು ಇಲಾಖೆ ಜಂಟಿ ನಿರ್ದೇಶಕ ವೀರಭದ್ರಯ್ಯ ನೇತೃತ್ವದಲ್ಲಿ ಬೀಳ್ಕೊಡುಗೆ ನೀಡಲಾಯಿತು. ಈ ವೇಳೆ ಮಾತನಾಡಿದ ವೀರಭದ್ರಯ್ಯ, ಡಾ.ಜಯಪ್ರಕಾಶ್ ಪಶು ಇಲಾಖೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ಅವಿಸ್ಮರಣೀಯ. ಅವರ ನಿವೃತ್ತಿ ಜೀವನ ಸುಃಖಕರವಾಗಿರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಪಶು ಇಲಾಖೆ ಉಪ ನಿರ್ದೇಶಕ ಡಿ.ಶಿವಣ್ಣ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಮೋಹನ್ ಕುಮಾರ್ ಸೇರಿದಂತೆ ಪಶು ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.