ಮಂಡ್ಯ: ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡಿ ವೋಟ್ ಪಡೆದು ರೈತರ ಕತ್ತು ಕುಯ್ಯುವ ಕೆಲಸ ಆಗ್ತಿದೆ ಎಂದು ನಟ ಜೋಗಿ ಪ್ರೇಮ್ ಹೇಳಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ನಾನು ಹುಟ್ಟಿದ್ದು ಮಂಡ್ಯ ಜಿಲ್ಲೆ, ನಾವು ರೈತರ ಮಕ್ಕಳೆ. ಈಗಲು ಎಮ್ಮೆ, ದನ ಸಾಕುತ್ತಿದ್ದೇನೆ. ದೇವರು ನಮ್ಮ ಮಂಡ್ಯ ಜಿಲ್ಲೆಗೆ ಹೋರಾಟದ ಶಾಪ ಕೊಟ್ಟಿದ್ದಾನೆ ಎಂದು ಬೇಸರಿಸಿದರು.
ಮಂಡ್ಯದವರು ಡ್ರಾಮಾ ಮಾಡ್ಕೊಂಡು ಮಾತನಾಡಲ್ಲ. ಕುಡಿಯುವ ನೀರಿಗಾಗಿ ಹೋರಾಟ ಮಾಡ್ತಾರೆ. ಮಂಡ್ಯ ಜಿಲ್ಲೆಯ ಜನರು ಬೆಂಗಳೂರಿಗೆ ನೀರು ಕೊಡ್ತಾರೆ ಎಂದರು.
ಇದು ರಾಜಕೀಯ. ಯಾವುದೇ ಪಕ್ಷ ಯಾರೇ ಸಿಎಂ ಆದ್ರು ರಾಜಕಾರಣ ಮಾಡ್ತಾರೆ. ಬಂಗಾರಪ್ಪ ಅವರು ಬಿಟ್ಟಿಲ್ಲ ಇವರು ಬಿಡಬಾರದಿತ್ತು. ಎಂಪಿ ಚುನಾವಣೆ ಬರ್ತಿದೆ ರಾಜಕೀಯ ಮಾಡ್ತಾರೆ. ರೈತರ ಜೊತೆ ನಾವು ಸದಾ ಇರ್ತೇವೆ. ಮಂಡ್ಯ ಜನರನ್ನ ಹೊಗಳಿ ವೋಟ್ ಪಡೆದು ಕತ್ತು ಕುಯುವ ಕೆಲಸ ಮಾಡ್ತಾರೆ ಎಂದು ಕಿಡಿಕಾರಿದರು.
ತಕ್ಷಣವೇ ನೀರು ನಿಲ್ಲಿಸಿ ರೈತರನ್ನ ಉಳಿಸಿ ಎಂದು ಆಗ್ರಹಿಸಿದರು.