Monday, April 21, 2025
Google search engine

Homeರಾಜ್ಯಎಂಟು ದಿನಗಳ ಬಳಿಕ ರೈತನ ಅಂತ್ಯಸಂಸ್ಕಾರ

ಎಂಟು ದಿನಗಳ ಬಳಿಕ ರೈತನ ಅಂತ್ಯಸಂಸ್ಕಾರ

ಚಂಡೀಗಢ: ದೆಹಲಿ ಚಲೋ ಭಾಗವಾಗಿ ರೈತರು ನಡೆಸಿದ ಮುಷ್ಕರದಲ್ಲಿ ಹರಿಯಾಣ ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಮೃತಪಟ್ಟ ಯುವರೈತ ಶುಭಕರಣ್ ಸಿಂಗ್ ಅವರ ಅಂತ್ಯಸಂಸ್ಕಾರ ಎಂಟು ದಿನಗಳ ಬಳಿ ಬಟಿಂಡಾದಲ್ಲಿ ನೆರವೇರಿತು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೊರ್ಚಾ ಸಂಘಟನೆಗಳು ದೆಹಲಿ ಚಲೋಗೆ ಕರೆ ನೀಡಿದ್ದವು.

ಈ ಸಂದರ್ಭದಲ್ಲಿ ಇವರನ್ನು ಹರಿಯಾಣ ಗಡಿಯಲ್ಲಿ ತಡೆಯಲಾಗಿತ್ತು. ಪಂಜಾಬ್ ಹಾಗೂ ಹರಿಯಾಣ ಗಡಿಭಾಗದಲ್ಲಿ ನಡೆದ ಪೊಲೀಸ್ ಹಾಗೂ ರೈತರ ನಡುವಿನ ಘರ್ಷಣೆಯಲ್ಲಿ ಫೆ. ೨೧ರಂದು ಮೃತಪಟ್ಟ ರೈತ ಸಾವಿಗೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಷ್ಕರ ನಿರತ ರೈತರು ಪಟ್ಟು ಹಿಡಿದಿದ್ದರು. ಶುಭಕರಣ್ ಅವರ ಮೃತದೇಹವನ್ನು ಪಟಿಯಾಲದಲ್ಲಿರುವ ರಾಜೀಂದ್ರ ವೈದ್ಯಕೀಯ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಪಂಜಾಬ್ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿಕೊಂಡರು. ನಂತರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶುಭಕರಣ್ ಅಂತ್ಯಸಂಸ್ಕಾರಕ್ಕೆ ರೈತರು ಸಿದ್ಧತೆ ನಡೆಸಿದರು.

ಮೃತದೇಹದ ಮೇಲೆ ರೈತ ಧ್ವಜವನ್ನು ಹೊದಿಸಲಾಗಿತ್ತು. ನಂತರ ಅವರ ಹುಟ್ಟೂರಾದ ಬಟಿಂಡಾದ ಬಲೋಹ್‌ಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿತು. ಘಟನೆ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, `ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲಾ ಆಯಾಮಗಳಿಂದಲೂ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದ ನಂತರ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಶುಭಕರಣ್ ಕುಟುಂಬಕ್ಕೆ ೧ ಕೋಟಿ ಪರಿಹಾರ ಹಾಗೂ ಅವರ ಸಹೋದರಿಗೆ ಸರ್ಕಾರಿ ನೌಕರಿ ಕೊಡುವುದಾಗಿ ಈಗಾಗಲೇ ಘೋಷಿಸಲಾಗಿದೆ’ ಎಂದಿದ್ದಾರೆ.

RELATED ARTICLES
- Advertisment -
Google search engine

Most Popular