ಮಂಡ್ಯ: ಕೆ.ಆರ್.ಪೇಟೆ ಪಟ್ಟಣದ ದೇವಿರಮ್ಮಣ್ಣಿ ಕೆರೆ ತುಂಬಿಸಲು ಆಗ್ರಹಿಸಿ ಕೆರೆಗಿಳಿದು ರೈತರ ಪ್ರತಿಭಟನೆ ನಡೆಸಿದ್ದಾರೆ.
ಕೆರೆ ಅಚ್ಚುಕಟ್ಟು ಸಮಿತಿ ಅಧ್ಯಕ್ಷ ಕೃಷ್ಣೇಗೌಡ ನೇತೃತ್ವದಲ್ಲಿ ಹೇಮಾವತಿ ಡ್ಯಾಂ ನಿಂದ ನೀರು ಹರಿಸಿ ಕೆರೆ ತುಂಬಿಸಲು ರೈತರು ಒತ್ತಾಯಿಸಿದ್ದಾರೆ.

ನೀರು ಬಿಡದೆ ಕೆರೆ ಕಟ್ಟೆಗಳಿಗೆ ಕೆರೆಯಲ್ಲಾ ಬರಿದಾಗಿದೆ. ನೀರಿಲ್ಲದ ರೈತರ ಜಮೀನುಗಳು ಒಣಗುತ್ತಿವೆ ರೈತರು ಸಂಕಷ್ಟದ ಸ್ಥಿತಿಗೆ ಸಿಲುಕಿದ್ದಾರೆ. ಕೆ.ಆರ್.ಎಸ್.ನಿಂದ ತಮಿಳುನಾಡಿಗೆ ಮಾತ್ರ ನೀರು ಬಿಟ್ಟಿದ್ದಾರೆ. ನಮ್ಮ ಕಾಲುವೆಗಳಿಗೆ ನೀರು ತುಂಬಿಸದೆ ನೀರಾವರಿ ಇಲಾಖೆ ಅಧಿಕಾರಿಗಳು ಬೇಜಾವಾಬ್ದಾರಿ ತೋರಿದ್ದಾರೆ. ಕೂಡಲೇ ಕೆರೆ ತುಂಬಿಸಲು ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ಧರಣಿ ಸತ್ಯಾಗ್ರಹ ನಡೆಸಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
