ಮಂಡ್ಯ: ಬರ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ ರೈತರು ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡವಾಳು ಚಂದ್ರಶೇಖರ್ ಹಾಗೂ ಮಂಜೇಶ್ ಗೌಡ ಮಾತನಾಡಿ, ಬರಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಮಂಡ್ಯ ರೈತರು ಮನವಿ ಮಾಡಿದ್ದಾರೆ. ಜಿಲ್ಲೆಯ ರೈತರು ಈಗಾಗಲೇ ಮೂರು ಬೆಳೆ ಕಳೆದುಕೊಂಡಿದ್ದೇವೆ. ನಾಲೆ ಆಧುನೀಕರಣ ಅಂತ ಅಧಿಕಾರಿಗಳು ಸಬೂಬು ಹೇಳ್ತಿದ್ದಾರೆ. ಮಳೆಯಿಂದ ಕೆ.ಆರ್.ಎಸ್ ಡ್ಯಾಂ ಗೆ ಸ್ವಲ್ಪ ಮಟ್ಟಿಗೆ ನೀರು ಬರ್ತಿದೆ. ಜೂನ್ ಮೊದಲವಾರದಲ್ಲಿ ಭಿತ್ತನೆ ಕಾರ್ಯ ಆರಂಭ ಮಾಡಬೇಕು. ಸರ್ಕಾರದಿಂದ ರೈತರಿಗೆ ಭಿತ್ತನೆ, ರಸಗೊಬ್ಬರ, ಹೊಸ ಸಾಲ, ಕೊಡಬೇಕು. ಬರ ಪರಿಹಾರ ಸಮರ್ಪಕವಾಗಿ ರೈತರಿಗೆ ಸಿಕ್ಕಿಲ್ಲ. 75ಸಾವಿರ ಜನ ರೈತರಿಗೆ 34ಕೋಟಿ ಕೊಟ್ಟಿದ್ದೇವೆ ಅಂತ ಡಿಸಿ ಹೇಳ್ತಿದ್ದಾರೆ. ಯಾವೊಬ್ಬ ರೈತರು ಸಹ ಇದುವರೆಗೂ ತಲುಪಿಲ್ಲ ಎಂದು ಹೇಳಿದರು.
ಎಲ್ಲಾ ರೈತರಿಗೂ ಹೊಸ ಸಾಲ ಸೌಲಭ್ಯ ಕೊಡಬೇಕು. ತಮಿಳುನಾಡಿಗೆ ಮತ್ತೆ ನೀರು ಬಿಡಲು ಸೂಚನೆ ಕೊಟ್ಟಿದ್ದಾರೆ. ನೀರಾವರಿ ಸಚಿವರ ಮಳೆ ಬರ್ತಿದೆ ಕೊಡ್ತಿದ್ದೇವೆ ಅಂತಾರೆ. ನಮಗೆ ನೀರಿಲ್ಲ, ಇವರು ಬೆಜಾವಬ್ದಾರಿತನ ತೋರುತ್ತಾರೆ. ನಮಗೆ ಕೆರೆ ಕಟ್ಟೆ ತುಂಬಲು ನೀರು ಬಿಟ್ಟಿಲ್ಲ ತಮಿಳುನಾಡಿಗೆ ಮಾತ್ರ ನೀರು ಕೊಡ್ತಿದ್ದಾರೆ. ತಕ್ಷಣವೇ ನಾಲೆ ಕೆಲಸ ಮುಗಿಸಿ ನೀರು ಬಿಡಬೇಕು ಭಿತ್ತನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಜಮೀನು ಪಾಳು ಬಿಟ್ಟ ರೈತರಿಗೂ 25 ಸಾವಿರ ಪರಿಹಾರ ಕೊಡಬೇಕು. ಹಾಲು ಉತ್ಪಾದಕರ ಪ್ರೋತ್ಸಾಹ ಧನ 10ರೂ ಗೆ ಹೆಚ್ಚಳ ಮಾಡಬೇಕು. ಯಾವುದೇ ತಾರತಮ್ಯ ಮಾಡದೆ ರೈತರಿಗೆ ಬರ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.