ಕೆ ಆರ್ ನಗರ: ಕೆ.ಆರ್.ನಗರ ತಾಲೂಕು ಬೀಜೋತ್ಪಾದಕ ರೈತರು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಬೀಜೋತ್ಪಾದನಾ ನಿಗಮಕ್ಕೆ ಭೇಟಿ ನೀಡಿ ಬೀಜೋತ್ಪಾದಕ ರೈತರು ಬೆಳೆದ ಭತ್ತಕ್ಕೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಮನವಿ ಸಲ್ಲಿಸಿದರು.
ಸದ್ಯ ಬಿಜೋತ್ಪಾದಕ ರೈತರು ನೀಡುವ ಭತ್ತಕ್ಕೆ ನೀಡುತ್ತಿರುವ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರವನ್ನು ನೀಡಬೇಕೆಂದು ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು.
ನಮ್ಮಿಂದ ಖರೀದಿಸುವ ಭತ್ತವನ್ನು ಸಿಡ್ಸ್ ಆಗಿ ಮಾರಾಟ ಮಾಡುವುದರಿಂದ ಕರ್ನಾಟಕ ರಾಜ್ಯ ಬೀಜೋತ್ಪಾದನಾ ನಿಗಮಕ್ಕೆ ಸಾಕಷ್ಟು ಅದಾಯ ಇದನ್ನು ಮನಗೊಂಡು ವೈಜ್ಞಾನಿಕ ಬೆಲೆಯನ್ನು ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಎಸ್. ದೇವರಾಜ್. ಪ್ರಧಾನ ವ್ಯವಸ್ಥಾಪಕರಾದ ಎಂ.ಎ. ಗಿರೀಶ್. ಪ್ರಧಾನ ವ್ಯವಸ್ಥಾಪಕ ಮಾರ್ಕೆಟಿಂಗ್ ಕೆ. ರಾಮಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆ.ಆರ್.ನಗರ ಬೀಜೋತ್ಪಾದಕ ರೈತರಾದ ಡೆಗ್ಗನಹಳ್ಳಿ ಕಾಂತ ಕುಮಾರ್, ಎಂ.ಎಸ್. ಗುರುಪ್ರಸಾದ್, ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ಚಂದಗಾಲು ಶಿವಪ್ಪಾಜಿ, ಕೆ .ಹೆಚ್. ಬುಡಿ ಗೌಡ, ಕಾಮನಹಳ್ಳಿ ಶ್ರೀನಿವಾಸ್, ಹಾಡ್ಯ ನಾಗೇಶ್, ಹಂಪಾಪುರ ಮಂಜುನಾಥ್, ಇದ್ದರು