ಮಂಡ್ಯ: ರೈತ ಹಿತ ರಕ್ಷಣಾ ಸಮಿತಿಯಿಂದ ಚಡ್ಡಿ, ಎಣ್ಣೆ ಬಾಟಲಿ ಹಿಡಿದು ವಿನೂತನವಾಗಿ ಪ್ರತಿಭಟಿಸಲಾಯಿತು.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ವೇದಿಕೆಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಸರ್ಕಾರದ ಮಂತ್ರಿಗಳಿಗೆ ಚೆಡ್ಡಿಯ ಚಿಂತೆ, ರಾಜ್ಯದ ರೈತರಿಗೆ ನೀರಿನ ಚಿಂತೆ ಎಂದು ಕಿಡಿಕಾರಿದರು.
ಹಳ್ಳಿ ಹಳ್ಳಿಗಳಿಗೆ ಬಾರು-ಬೀರು ಬೇಡ. ನೀರಾವರಿ ಯೋಜನೆಗಳನ್ನ ನೀಡಿ ಎಂದು ಘೋಷಣೆ ಕೂಗಿದರು.
ರಾಜ್ಯದ ಸಂಸದರು, ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೈಯಲ್ಲಿ ಚಡ್ಡಿ, ಎಣ್ಣೆ ಖಾಲಿ ಬಾಟಲಿಗಳನ್ನ ಹಿಡಿದು ಪ್ರತಿಭಟನೆ ನಡೆಸಲಾಯಿತು.