Sunday, April 20, 2025
Google search engine

Homeರಾಜ್ಯರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ಅಪಘಾತ: ನಾಲ್ವರು ಸಾವು

ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ಅಪಘಾತ: ನಾಲ್ವರು ಸಾವು

ವಿಜಯಪುರ: ನಗರದ ಹೊರ ವಲಯದಲ್ಲಿರುವ ಹಿಟ್ನಳ್ಳಿ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟ ಘಟನೆ ಆ.17ರ ಮಂಗಳವಾರ ರಾತ್ರಿ ಸಂಭವಿಸಿದೆ.‌

ಅಪಘಾತದಲ್ಲಿ ಮೃತರಾದವರನ್ನು ನಗರದ ವಜ್ರಹನುಮಾನ ಪ್ರದೇಶದ ನಿವಾಸಿಗಳಾದ ಶಿವಾನಂದ ಚೌಧರಿ ( 25) ಸುನೀಲ ಖಾನಾಪೂರ(26) ಈರಣ್ಣ ಕೋಲಾರ (26) ಪ್ರವೀಣ ಪಾಟೀಲ್ (30) ಎಂದು ಗುರುತಿಸಲಾಗಿದೆ.

ಟೋಲ್‌ ಬಳಿಯ ಸರ್ವೀಸ್ ರಸ್ತೆಯ ಡಿವೈಡರ್ ಮೇಲೆ ನಾಲ್ವರು ಕುಳಿತಿದ್ದಾಗ ಅಪರಿಚಿತ ವಾಹನ ಹರಿದು ನಾಲ್ವರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ನಾಲ್ವರ ಬೈಕ್ ಮೇಲೂ ಹರಿದು ಅಪರಿಚಿತ ಟ್ರಕ್ ಸವಾರ, ವಾಹನ ಸಮೇತ ಪರಾರಿಯಾಗಿದ್ದಾನೆ.

ಅಪಘಾತದಲ್ಲಿ ಪಲ್ಸರ್ ಹಾಗೂ ಸಿಬಿಝಡ್ ಬೈಕ್ ಜಖಂಗೊಂಡಿದೆ.

ಸ್ಥಳಿಯರ ಮಾಹಿತಿ ಪ್ರಕಾರ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದ್ದು, ಅಪಘಾತಕ್ಕೆ ಕಾರಣವಾದ ಪರಾರಿಯಾಗಿರುವ ಲಾರಿ MH12 QW 8521 ಸಂಖ್ಯೆ ಹೊಂದಿತ್ತು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಸುದ್ದಿ ತಿಳಿಯುತ್ತಲೇ ವಿಜಯಪುರ ಗ್ರಾಮೀಣ ವಿಭಾಗದ ಡಿವೈಎಸ್ಪಿ ಗಿರಿಮಲ್ಲ ತಳಕಟ್ಟಿ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಸಂಭವಿಸಿದೆ‌.

RELATED ARTICLES
- Advertisment -
Google search engine

Most Popular