ಹೈದರಾಬಾದ್: ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿಗಳಲ್ಲಿ ಒಂದಾದ ಭಾರತದ ಅಗ್ನಿ ಕ್ಷಿಪಣಿಯ ಪಿತಾಮಹ ಖ್ಯಾತ ವಿಜ್ಞಾನಿ ರಾಮ್ ನಾರಾಯಣ್ ಅಗರ್ವಾಲ್ ಅವರು ಗುರುವಾರ (ಆಗಸ್ಟ್ 15) ರಂದು ನಿಧನ ಹೊಂದಿದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಭಾರತವನ್ನು ಕ್ಷಿಪಣಿ ಶಕ್ತಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ:
DRDO ಅಧಿಕಾರಿಯ ಪ್ರಕಾರ, ರಾಮ್ ನಾರಾಯಣ್ ಅಗರ್ವಾಲ್ ಭಾರತವನ್ನು ಪ್ರಮುಖ ಕ್ಷಿಪಣಿ ಶಕ್ತಿಯನ್ನಾಗಿ ಮಾಡುವಲ್ಲಿ ಬಹಳ ಪ್ರಮುಖ ಪಾತ್ರವನ್ನು ಹೊಂದಿದ್ದರು. ಭಾರತದ ದೀರ್ಘ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದಲ್ಲಿ ಅಗರ್ವಾಲ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ಅಗ್ನಿ ಕ್ಷಿಪಣಿಗಳ ಮೊದಲ ನಿರ್ದೇಶಕರಾಗಿದ್ದರು.
ಸಂತಾಪ:
ರಾಮ್ ನಾರಾಯಣ್ ಅಗರ್ವಾಲ್ ಅವರ ನಿಧನಕ್ಕೆ DRDO ನ ಮಾಜಿ ವಿಜ್ಞಾನಿಗಳು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಅವರು ವಿಜ್ಞಾನಿಯಾಗಿ ತಮ್ಮ ವೃತ್ತಿಜೀವನದಲ್ಲಿ ಅನೇಕ ಯಶಸ್ವಿ ಕಾರ್ಯಗಳನ್ನು ನಡೆಸಿದ್ದಾರೆ ಅವರ ಮಾರ್ಗದರ್ಶನ ಇತರ ವಿಜ್ಞಾನಿಗಳಿಗೆ ಪ್ರೇರಣೆಯಾಗಲಿದೆ. ದೇಶದಲ್ಲಿ ದೀರ್ಘ-ಶ್ರೇಣಿಯ ಕ್ಷಿಪಣಿ ತಯಾರಿಕೆ ಮತ್ತು ಉಡಾವಣಾ ಸೌಲಭ್ಯಗಳನ್ನು ವಿಸ್ತರಿಸುವಲ್ಲಿ ರಾಮ್ ನಾರಾಯಣ ಅಗರ್ವಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
DRDO ತಯಾರಿಸಿದ ಅಗ್ನಿ ಕ್ಷಿಪಣಿಯನ್ನು ಭಾರತದ ಪರಮಾಣು ಉಡಾವಣಾ ಸಾಮರ್ಥ್ಯದ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ. ಇಲ್ಲಿಯವರೆಗೆ, ಅಗ್ನಿ ಕ್ಷಿಪಣಿಯ ಐದು ರೂಪಾಂತರಗಳನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.
ಕ್ಷಿಪಣಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅದನ್ನು ಸ್ವಾವಲಂಬಿಯಾಗಿಸುವುದು ಉದ್ದೇಶವಾಗಿತ್ತು ಅದರಂತೆ ಅಗ್ನಿ 1- 700-800 ಕಿ.ಮೀ, ಅಗ್ನಿ 2 – 2000 ಕಿ.ಮೀಗಿಂತ ಹೆಚ್ಚು, ಅಗ್ನಿ 3 – 2500 ಕಿ.ಮೀಗಿಂತ ಹೆಚ್ಚು, ಅಗ್ನಿ 4 – 3500 ಕಿ.ಮೀಗಿಂತ ಹೆಚ್ಚು ಮತ್ತು ಅಗ್ನಿ 5 – 5000 ಕಿ.ಮೀಗಿಂತ ಹೆಚ್ಚು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿತ್ತು.