Wednesday, April 9, 2025
Google search engine

Homeಅಪರಾಧವಿದ್ಯುತ್ ತಂತಿ ತಗುಲಿ ತಂದೆ - ಮಗ ಸಾವು

ವಿದ್ಯುತ್ ತಂತಿ ತಗುಲಿ ತಂದೆ – ಮಗ ಸಾವು

ಬೆಳಗಾವಿ: ವಿದ್ಯುತ್ ಕಂಬಕ್ಕೆ ಸಪೋರ್ಟಿವ್ ಆಗಿ ಕಟ್ಟಿದ್ದ ಅರ್ಥಿಂಗ್ ವೈಯರ್ ಸ್ಪರ್ಶಿಸಿದ ಪರಿಣಾಮ ತಂದೆ ಹಾಗೂ ಮಗ ಮೃತಪಟ್ಟಿರುವ ದಾರುಣ ಘಟನೆ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಇಂದು ಶುಕ್ರವಾರ ಸಂಭವಿಸಿದೆ. ಪ್ರಭು ಹುಂಬಿ (೬೮), ಮಂಜುನಾಥ ಹುಂಬಿ(೨೯) ಮೃತ ದುರ್ದೈವಿಗಳು.

ಮನೆ ಮುಂದಿನ ಕಸ ತೆಗೆಯುವಾಗ ನೆಲಕ್ಕೆ ಬಿಗಿದಿದ್ದ ವೈಯರ್ ತಂದೆ ಹಿಡಿದುಕೊಂಡಿದ್ದಾರೆ. ಈ ವೇಳೆ ವಿದ್ಯುತ್ ಪ್ರವಹಿಸಿದ್ದರಿಂದ ತಂದೆ ಕೆಳಗೆ ಬಿದ್ದು ಒದ್ದಾಡುತ್ತಿದ್ದರು. ಅದನ್ನು ಗಮನಿಸಿದ ಪುತ್ರ ತಂದೆಯನ್ನು ವೈಯರ್‌ನಿಂದ ಬಿಡಿಸಲು ಹೋಗಿದ್ದಾರೆ. ಈ ವೇಳೆ ವಿದ್ಯುತ್ ತಗುಲಿದೆ. ಈ ವೇಳೆ, ತಂದೆ ಪ್ರಭು ಸ್ಥಳದಲ್ಲೇ ಕೊನೆಯುಸಿರೆಳೆದರೆ, ಪುತ್ರ ಮಂಜುನಾಥ ಆಸ್ಪತ್ರೆಗೆ ದಾಖಲಿಸಿದ ಕೆಲವು ನಿಮಿಷಗಳ ಬಳಿಕ ಮೃತರಾಗಿದ್ದಾರೆ.

ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದ ತಂದೆ, ಮಗ ಸಾವನ್ನಪ್ಪಿದ್ದಾರೆ. ಅನೇಕ ಬಾರಿ ಮನವಿ ಮಾಡಿಕೊಂಡರೂ ವಿದ್ಯುತ್ ಕಂಬವನ್ನು ತೆರವುಗೊಳಿಸಿರಲಿಲ್ಲ. ಇದರಿಂದಲೇ ದುರಂತ ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

RELATED ARTICLES
- Advertisment -
Google search engine

Most Popular