ವರದಿ: ಸ್ಟೀಫನ್ ಜೇಮ್ಸ್
ವಿಜಯಪುರ: ದಯವಿಟ್ಟು ಮ್ಮನ್ನು ಬಿಟ್ಟು ಹೋಗಬೇಡಿ, ನಿಮ್ಮನ್ನ ನಾವು ಬಿಟ್ಟಿರಲ್ಲ, ಅಪ್ಪಿಕೊಂಡು, ಕಂಬನಿಯಿಟ್ಟು ನಮ್ಮನ್ನು ಬಿಟ್ಟು ಹೋಗಬೇಡಿ, ಕಾಲು ಹಿಡಿದು ಹೀಗೆ ಮಕ್ಕಳು ಕಣ್ಣೀರಿಡುತ್ತಿದ್ದರೆ ನೆರೆದವರ ಕಣ್ಣಾಲೆಗಳು ಒದ್ದೆ ಯಾಗುತ್ತಿತ್ತು. ಇಷ್ಟಕ್ಕೂ ಮಕ್ಕಳ ಈ ರೋಧನೆಗೆ ಕಾರಣ ಶಿಕ್ಷಕಿಯ ವರ್ಗಾವಣೆ. ವಿಜಯಪುರ ಜಿಲ್ಲೆಯ ಕೊಲ್ಲಾರ ತಾಲೂಕಿನ ಕೂಡಗಿ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಬಹುಮುಖ ಪ್ರತಿಭೆಯ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿ ಪ್ರತಿಭಾ ತೊರವಿ ಹಠಾತ್ ಬೇರೆ ಶಾಲೆಗೆ ವರ್ಗಾವಣೆ ಸುದ್ದಿ ತಿಳಿದು, ಬೆಳಗಿನ ಪ್ರಾರ್ಥನೆ ಸಮಯ ವರ್ಗಾವಣೆ ವಿಷಯ ಮಕ್ಕಳು ಕಣ್ಣೀರಿಡಲು ಶುರು ಮಾಡಿದರು.
ತಮಗೆ ಪಾಠ ಹೇಳಿಕೊಡುವಷ್ಟೇ ಅಲ್ಲದೆ ಬದುಕು ಹೇಗೆ ಸಾಗಿಸಬೇಕು ಎಂದು ಹೃದಯಸ್ಪರ್ಶಿ ಪಾಠಗಳನ್ನು ಕಲಿಸಿದ್ದ ಶಿಕ್ಷಕಿ ನಮ್ಮನ್ನು ಬಿಟ್ಟು ಬೇರೆ ಶಾಲೆಗೆ ಹೋಗುತ್ತಿದ್ದಾರೆಂಬ ಕಲ್ಪನೆಯೇ ಮಕ್ಕಳಿಗೆ ಸಹಿಸಲಾಗಲಿಲ್ಲ. ಸಣ್ಣಪುಟ್ಟ ಮಕ್ಕಳಿಂದ ಹಿಡಿದು ಹಿರಿಯ ತರಗತಿಯ ವಿದ್ಯಾರ್ಥಿಗಳವರೆಗೂ ಕಣ್ಣೀರಿನಲ್ಲಿ ತೇಲಿದರು. ತರಗತಿಗೆ ಬಂದು ತಾಯಿ ತರಹ ಮುದ್ದಾಡುತ್ತಿದ್ದ, ತಪ್ಪು ಮಾಡಿದಾಗ ಅಳುವ ಬದಲು ತಿದ್ದಿ ಪಾಠ ಕಲಿಸುತ್ತಿದ್ದ ಅಕ್ಕನಂತೆ ಕಾಣುತ್ತಿದ್ದ ಶಿಕ್ಷಕಿಯ ವರ್ಗಾವಣೆ ವಿಷಯ ತಿಳಿದು ಮಕ್ಕಳು ನಾವು ನಾಳೆಯಿಂದ ಶಾಲೆಗೆ ಬರುವುದಿಲ್ಲಾವೆಂದು ಬ್ಯಾಗ್ ತರದೇ ಹಠ ಹಿಡಿದು ಕುಳಿತರು.
ಕಳೆದ ಕೆಲವು ವರ್ಷಗಳಲ್ಲಿ ಶಾಲೆಯ ಸಾಧನೆ ಹೆಚ್ಚಲು, ಮಕ್ಕಳಲ್ಲಿ ಪಠ್ಯ ಅಧ್ಯಯನದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸತತ ನಗದು ಬಹುಮಾನ, ಜಿಲ್ಲಾ ಮಟ್ಟದವರೆಗೆ ಪ್ರತಿಭಾ ಕಾರಂಜಿ, ಕ್ರೀಡೆ ಬೆಳವಣಿಗೆಯೂ ಅವರದೇ ಆದ ಕಾಳಜಿ ಮಾರ್ಗದರ್ಶನ ಕಾರಣವಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿನಿಯಲ್ಲೂ ಅಡಗಿದ್ದ ಪ್ರತಿಭೆಯನ್ನು ಹೊರ ತಂದಿದ್ದ ಮಮತೆಯ ಶಿಕ್ಷಕಿಯ ವರ್ಗಾವಣೆ ವಿದ್ಯಾರ್ಥಿಗಳ ಬದುಕಿನಲ್ಲಿ ದೊಡ್ಡ ಶೂನ್ಯವನ್ನು ಬಿಟ್ಟಿದೆ. ವರ್ಗಾವಣೆ ವಿಚಾರ ತಿಳಿದ ಪೋಷಕರೂ ಶಾಲೆಗೆ ಆಗಮಿಸಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
“ನಮ್ಮ ಮಕ್ಕಳು ಅನಾಥರಂತೆ ಶಾಲೆಯಲ್ಲಿ ಉಳಿಯುವಂತಾಗಿದೆ, ಶಿಕ್ಷಕಿ ನಮ್ಮ ಹೃದಯದಲ್ಲಿ ಸದಾ ಇರುತ್ತಾರೆ” ಎಂದು ಕಣ್ಣೀರಿಟ್ಟರು. ಶಿಕ್ಷಕಿ ಸ್ವತಃ ಉಳಿಯುವಂತಾಗಿದೆ, ಶಿಕ್ಷಕಿ ನಮ್ಮ ಹೃದಯದಲ್ಲಿ ಸದಾ ಇರುತ್ತಾರೆ” ಎಂದು ಕಣ್ಣೀರಿಟ್ಟರು. ಶಿಕ್ಷಕಿ ಸ್ವತಃ ತಮ್ಮ ಕಣ್ಣೀರನ್ನು ತಡೆದು ಮಕ್ಕಳಿಗೆ ಧೈರ್ಯ ತುಂಬಿ ಹೇಳಿದರು.
“ನಮ್ಮ ಹಾದಿ ಬೇರೆಯಾದರೂ, ನಿಮ್ಮ ಸಾಧನೆಯ ಸುದ್ದಿಗಳು ನನ್ನ ಬದುಕಿನ ಆನಂದವಾಗಲಿದೆ ಎಂದರು. ಮಕ್ಕಳು ಪಾಲಕರು, ಗ್ರಾಮಸ್ಥರು ಎಲ್ಲರೂ ಸೇರಿ ಶಾಲೆಯ ಆವರಣದಲ್ಲಿ ಪ್ರತಿಭಟಿಸಿ ಬೇರೆ ಶಾಲೆಗೆ ವರ್ಗಾವಣೆ ಮಾಡಲು ಬಿಡುವುದಿಲ್ಲಾ, ನಾಳೆಯಿಂದ ಶಾಲೆಗೆ ಬರುವುದಿಲ್ಲ, ನಾವು ಸಾಮೂಹಿಕವಾಗಿ ಬೇರೆ ಶಾಲೆಗೆ ಹೋಗುತ್ತೇವೆ ಎಂದು ಮಕ್ಕಳು ಹಠ ಹಿಡಿದರು. ಪಾಲಕರು ಶಾಲೆಯ ಎಸ್ಟಿಎಂಸಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಸೇರಿ ಇಲಾಖೆಯ ಅಧಿಕಾರಿಗಳಿಗೆ ದೊರವಾಣಿ ಕರೆ ಮಾಡಿ ನೀವು ಶಾಲೆಗೆ ತಕ್ಷಣ ಬರಬೇಕು. ಅಲ್ಲಿಯವರೆಗೆ ಮಕ್ಕಳು ಪಾಲಕರು ಶಾಲಾ ಆವರಣದಲ್ಲಿ ಖಂಡಿಸಿ ಕುಳಿತರು . ಮಧ್ಯಾಹ್ನದ ವೇಳೆಗೆ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಪುರೋಹಿತ ಆಗಮಿಸಿ ವರ್ಗಾವಣೆ ಆನಲೈನ್ ಪ್ರಕ್ರೀಯೆಯಾಗಿದ್ದು ವರ್ಗಾವಣೆ ಕಡ್ಡಾಯವಾಗಿದ್ದು ವಿಷಯ ತಿಳಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಪ್ರಯತ್ನಿಸಲಾಗುವುದು ಎಂದು ಹೇಳಿ ಮಕ್ಕಳು ಹಾಗೂ ಪಾಲಕರಿಗೆ ಮನವರಿಕೆ ಮಾಡಿದರು.
ಮಕ್ಕಳು ಪಾಲಕರು ಬೇರೆ ಶಿಕ್ಷಕರನ್ನು ವರ್ಗಾಹಿಸಿ ತೊಂದರೆಯಿಲ್ಲಾ, ಪ್ರತಿಭಾ ಟೀಚರ್ ನಮಗೆ ಬೇಕೆಂದು ಕಣ್ಣೀರಿನೊಂದಿಗೆ ಹಠಹಿಡಿದು ಕುಳಿತರು. ಮಕ್ಕಳ ಈ ಅಳಲು ಕಂಡು ಸೇರಿದ ಪಾಲಕರು, ನೆರೆದ ಗ್ರಾಮಸ್ಥರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಕಣ್ಣಾಲೆಗಳು ತೇವವಾದವು.